alex Certify BIG NEWS: ಸಮ್ಮತಿಯಿಂದ ದೈಹಿಕ ಸಂಪರ್ಕ ನಡೆದರೆ ಅಪರಾಧವಲ್ಲ; ಆಕಸ್ಮಿಕ ಘಟನೆಗೆ ರಮೇಶ್ ಜಾರಕಿಹೊಳಿ ಬಲಿ; ಸಾಹುಕಾರ್ ಪರ ಸಚಿವ ಮಾಧುಸ್ವಾಮಿ ಬ್ಯಾಟಿಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸಮ್ಮತಿಯಿಂದ ದೈಹಿಕ ಸಂಪರ್ಕ ನಡೆದರೆ ಅಪರಾಧವಲ್ಲ; ಆಕಸ್ಮಿಕ ಘಟನೆಗೆ ರಮೇಶ್ ಜಾರಕಿಹೊಳಿ ಬಲಿ; ಸಾಹುಕಾರ್ ಪರ ಸಚಿವ ಮಾಧುಸ್ವಾಮಿ ಬ್ಯಾಟಿಂಗ್

ಉಡುಪಿ: ರಮೇಶ್ ಜಾರಕಿಹೊಳಿ ರಾಜೀನಾಮೆ ನಿರ್ಧಾರ ವಿಚಾರವಾಗಿ ಮಾತನಾಡಿದ ಸಚಿವ ಮಾಧುಸ್ವಾಮಿ, ಆಕಸ್ಮಿಕ ಘಟನೆಗೆ ರಮೇಶ್ ಬಲಿಯಾಗಿದ್ದಾರೆ, ಸರ್ಕಾರ ಹಾಗೂ ಬಿಜೆಪಿಯಿಂದ ಅವರಿಗೆ ಯಾವುದೇ ತೊಂದರೆಯಾಗಿಲ್ಲ. ಎಲ್ಲಾ ಶಾಸಕರಿಗೂ ಅವರ ಮೇಲೆ ಅನುಕಂಪವಿದೆ ಎಂದು ಹೇಳಿದ್ದಾರೆ.

ಆನ್‌ ಲೈನ್‌ ಕ್ಲಾಸ್: ನೆಟ್ವರ್ಕ್‌ ಗಾಗಿ ಮರವೇರಿ ಕುಳಿತ ವಿದ್ಯಾರ್ಥಿಗಳು

ಉಡುಪಿಯಲ್ಲಿ ಮಾತನಾಡಿದ ಮಾಧುಸ್ವಾಮಿ, ಸಿಡಿ ಪ್ರಕರಣ ಇದೊಂದು ಕಾನೂನಾತ್ಮಕ ಹಾಗೂ ನೈತಿಕ ವಿಚಾರವಾಗಿದೆ. ನೈತಿಕ ಹೊಣೆಹೊತ್ತು ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ ಕಾನೂನಾತ್ಮಕವಾಗಿ ಸಮಸ್ಯೆ ಇದೆ ಅನಿಸಲ್ಲ. ಸಮ್ಮತಿಯಿಂದ ನಡೆದ ದೈಹಿಕ ಸಂಪರ್ಕ ಅಪರಾಧವಲ್ಲ. ಹೀಗೆಂದು ಸುಪ್ರೀಂ ಕೋರ್ಟ್ ಹೇಳಿದೆ. ಯುವತಿ ವರ್ತನೆ ನೋಡಿದರೆ ಇಚ್ಛಿಸಿ ಹೋಗಿದ್ದಾರೆ ಅನಿಸುತ್ತೆ. ಹೀಗಾಗಿ ರಮೇಶ್ ಜಾರಕಿಹೊಳಿಗೆ ಶಿಕ್ಷೆಯಾಗಲಾರದು ಎಂದರು.

ಜುಲೈ 14ರಂದು ಟೋಕಿಯೋಗೆ ತೆರಳಲಿದೆ ಭಾರತೀಯ ಒಲಿಂಪಿಕ್ಸ್ ಮೊದಲ ತಂಡ

ನ್ಯಾಯಾಲಯದಲ್ಲಿ ಪ್ರಕರಣ ಇರುವಾಗ ಯಾರನ್ನೂ ದೂರಲು ಆಗದು, ಎಲ್ಲವನ್ನು ಎದುರಿಸಬೇಕು ಅಷ್ಟೇ. ಇನ್ನು ಶಾಸಕ ಸ್ಥಾನಕ್ಕೆ ರಮೇಶ್ ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದು ಹೇಳಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...