alex Certify ತಾಜ್‌ ಮಹಲ್‌ ತದ್ರೂಪು ಸೃಷ್ಟಿಸಿದ ಮೈನ್‌ಕ್ರಾಫ್ಟ್‌ ಬಿಲ್ಡರ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಾಜ್‌ ಮಹಲ್‌ ತದ್ರೂಪು ಸೃಷ್ಟಿಸಿದ ಮೈನ್‌ಕ್ರಾಫ್ಟ್‌ ಬಿಲ್ಡರ್‌

ದೇಶದಲ್ಲೇ ಅತ್ಯಂತ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಸ್ಮಾರಕವಾದ ತಾಜ್ ಮಹಲ್‌ಗೆ ಯಾವಾಗಲೂ ಪ್ರವಾಸೋದ್ಯಮ ನಕ್ಷೆಯಲ್ಲಿ ವಿಶೇಷ ಸ್ಥಾನಮಾನ ಇದ್ದೇ ಇರುತ್ತದೆ.

ಬಹಳಷ್ಟು ಸಿನೆಮಾಗಳು, ಕಲಾಚಿತ್ರಗಳಲ್ಲಿ ತಾಜ್ ಮಹಲ್‌ನ ಸೌಂದರ್ಯವನ್ನು ಬಿಂಬಿಸಿಕೊಂಡು ಬರಲಾಗುತ್ತಿದೆ. ಇದೀಗ ಮೈನ್‌ಕ್ರಾಫ್ಟ್‌ ಗೇಮ್ ಒಂದರಲ್ಲಿ ತಾಜ್ ಮಹಲ್‌ನ ತದ್ರೂಪು ರಚಿಸಲಾಗಿದೆ. ’ಬಿಲ್ಡ್‌ ದಿ ಅರ್ತ್’ ಎಂಬ ಈ ಪ್ರಾಜೆಕ್ಟ್‌ನಲ್ಲಿ 1:1 ಅನುಪಾತದಲ್ಲಿ ನಿರ್ಮಾಣಗೊಂಡ ತಾಜ್‌ ಮಹಲ್ ತದ್ರೂಪಿನ ಚಿತ್ರವನ್ನು ರೆಡ್ಡಿಟ್‌ನಲ್ಲಿ ಶೇರ್‌ ಮಾಡಲಾಗಿದೆ. ಇದೇ ಪ್ರಾಜೆಕ್ಟ್‌ನಲ್ಲಿ ಇಡೀ ಭೂಮಂಡಲದ ಮಾದರಿಯನ್ನು 1:1 ಅನುಪಾತದಲ್ಲಿ ಕಟ್ಟುವ ಆಶಯವನ್ನು ಇಟ್ಟುಕೊಳ್ಳಲಾಗಿದೆ.

ಪೋಷಕರಿಂದ ಹಣ ಕೀಳಲು ತನ್ನದೇ ಅಪಹರಣ ಕಥೆ ಕಟ್ಟಿದ ಭೂಪ….!

ಕೋವಿಡ್ ಸಾಂಕ್ರಮಿಕದಿಂದ ಜಗತ್ತಿನಾದ್ಯಂತ ಜನರು ತಂತಮ್ಮ ಮನೆಗಳನ್ನು ಸೇರಿಕೊಂಡಾಗಿನಿಂದ ಈ ಪ್ರಾಜೆಕ್ಟ್‌ ಆರಂಭಗೊಂಡಿದೆ. ಭೂಮಿ ಮೇಲಿನ ಸುಂದರವಾದ ನಗರಗಳು, ಸ್ಮಾರಕಗಳು, ತಾಣಗಳನ್ನು ಮೈನ್‌ಕ್ರಾಫ್ಟ್‌ನಲ್ಲಿ ಮರುಸೃಷ್ಟಿ ಮಾಡುವ ಆಶಯವನ್ನು ಯೂಟ್ಯೂಬರ್‌ ಪಿಪ್ಪಿನ್‌ಎಫ್‌ಟಿಎಸ್‌ ವ್ಯಕ್ತಪಡಿಸಿದ್ದರು.

ಕಿಡ್ನಿ ಮಾರಾಟ ಬೃಹತ್ ಜಾಲ ಬೇಧಿಸಿದ ಪೊಲೀಸರು; ನೈಜೀರಿಯಾ ಮೂಲದ ಕಿಂಗ್ ಪಿನ್ ಬಂಧನ

ಇದಕ್ಕೆ ಪ್ರತಿಕ್ರಿಯಿಸಲು ಆರಂಭಿಸಿರುವ ಜನರು ತಂತಮ್ಮ ವಿವಿಗಳು, ಕಾಲೇಜು ಕ್ಯಾಂಪಸ್‌ಗಳು ಸೇರಿದಂತೆ ಅನೇಕ ರಚನೆಗಳನ್ನು ವರ್ಚುವಲ್ ಆಗಿ ಕಟ್ಟಲು ಆರಂಭಿಸಿದ್ದರು. ಆದರೆ ಇಡೀ ಗ್ರಹವನ್ನು ಗೇಮ್‌ನಲ್ಲಿ ನಿರ್ಮಾಣ ಮಾಡುವುದು ಭಾರೀ ದೊಡ್ಡ ಸವಾಲೇ ಸರಿ.

ಭೂಮಿಯ ಮೈಲ್ಮೈ ವಿಸ್ತೀರ್ಣ 500 ದಶಲಕ್ಷ ಚದರ ಮೀಟರ್‌ಗಳಷ್ಟಿದ್ದು, ಮೈನ್‌ಕ್ರಾಫ್ಟ್‌ನಲ್ಲಿ ಸಿಗುವ ವರ್ಚುವಲ್ ವಿಸ್ತೀರ್ಣ 4 ಶತಕೋಟಿ ಚದರ ಮೀಟರ್‌ಗಳಷ್ಟಿರುವ ಕಾರಣ ಈ ಕೆಲಸ ಅಸಾಧ್ಯವೂ ಅಲ್ಲ. ಇಷ್ಟು ವಿಸ್ತೀರ್ಣದಲ್ಲಿ ಸೌರಮಂಡಲದ ಎಂಟೂ ಗ್ರಹಗಳನ್ನು ಮರುಸೃಷ್ಟಿ ಮಾಡಬಹುದಾಗಿದೆ.

https://www.instagram.com/p/CLTH4euph3F/?utm_source=ig_web_copy_link

https://www.instagram.com/p/CFafm5mpr_r/?utm_source=ig_web_copy_link

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...