ಬ್ಯಾಟಲ್ ಗ್ರೌಂಡ್ ಮೊಬೈಲ್ ಇಂಡಿಯಾ ಭಾರತದಲ್ಲಿ ಪ್ರಾರಂಭವಾಗಿದೆ. ಗೂಗಲ್ ಪ್ಲೇ ಸ್ಟೋರ್ ನಿಂದ ಇದನ್ನು ಡೌನ್‌ಲೋಡ್ ಮಾಡಬಹುದು. ಬ್ಯಾಟಲ್ ಗ್ರೌಂಡ್ ಮೊಬೈಲ್ ಪ್ರಾರಂಭಿಸಿದ ಕಂಪನಿ, ಬಳಕೆದಾರರಿಗೆ ಮಹತ್ವದ ಮಾಹಿತಿ ನೀಡಿದೆ. ಜುಲೈ 6 ರ ನಂತರ ಪಬ್ಜಿ ಬಳಕೆದಾರರು ಯಾವುದೇ ಡೇಟಾವನ್ನು ಬ್ಯಾಟಲ್ ಗ್ರೌಂಡ್ ಮೊಬೈಲ್ ಇಂಡಿಯಾಕ್ಕೆ ವರ್ಗಾಯಿಸಲು ಸಾಧ್ಯವಾಗುವುದಿಲ್ಲ ಎಂದು ಕಂಪನಿ ತಿಳಿಸಿದೆ.
ಬ್ಯಾಟಲ್ ಗ್ರೌಂಡ್ ಇಂಡಿಯಾ ನಿರ್ವಹಣೆ ಕೆಲಸವಿದೆ. ಆದ ಕಾರಣ ಜುಲೈ 6 ರಿಂದ ಬಳಕೆದಾರರು ಡೇಟಾವನ್ನು ಪಬ್ಜಿ ಮೊಬೈಲ್‌ನಿಂದ ಬ್ಯಾಟಲ್ ಗ್ರೌಂಡ್ ಮೊಬೈಲ್ ಇಂಡಿಯಾಕ್ಕೆ ವರ್ಗಾಯಿಸಲು ಸಾಧ್ಯವಾಗುವುದಿಲ್ಲ ಎಂದು ಕಂಪನಿ ಹೇಳಿದೆ.
ಗೂಗಲ್ ಪ್ಲೇ ಸ್ಟೋರ್‌ನಿಂದ ಬ್ಯಾಟಲ್ ಗ್ರೌಂಡ್ ಮೊಬೈಲ್ ಇಂಡಿಯಾವನ್ನು ಸರ್ಚ್ ಮಾಡಬಹುದು. ನಂತ್ರ ಅದನ್ನು ಡೌನ್ಲೋಡ್ ಮಾಡಬೇಕು. ಈಗಾಗಲೇ ಡೌನ್ಲೋಡ್ ಆಗಿದ್ದಲ್ಲಿ ನವೀಕರಣದ ಅಗತ್ಯವಿದೆ. ಬ್ಯಾಟಲ್ ಗ್ರೌಂಡ್ ಇಂಡಿಯಾ ಆಗಸ್ಟ್ ವೇಳೆಗೆ 5 ಮಿಲಿಯನ್ ಡೌನ್ಲೋಡ್ ಆಗಲಿದೆ ಎಂದು ಕಂಪನಿ ಹೇಳಿದೆ. ಪಬ್ಜಿ, ಬ್ಯಾಟಲ್ ಗ್ರೌಂಡ್ ಇಂಡಿಯಾ ಹೆಸರಿನಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ.