ದಾವಣಗೆರೆ: ರಾಜ್ಯದಲ್ಲಿ ನಿಜವಾದ ಸಿಎಂ ಬಿ.ಎಸ್.ಯಡಿಯೂರಪ್ಪ ಅಲ್ಲ, ಅವರ ಪುತ್ರ ಬಿ.ವೈ.ವಿಜಯೇಂದ್ರ, ವಾಸ್ತವದಲ್ಲಿ ಯಡಿಯೂರಪ್ಪ ಸಿಎಂ ಆಗಿ ಉಳಿದಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಚೆಕ್ ಮೂಲಕ ಲಂಚ ಪಡೆಯುವುದು ಬಿಜೆಪಿಗೆ ಹೊಸದೇನಲ್ಲ. ವಿಜಯೇಂದ್ರ ಪ್ರತಿ ಕೆಲಸಕ್ಕೆ ಶೇ.20ರಷ್ಟು ಲಂಚ ಪಡೆಯುತ್ತಾರೆ. ಯಡಿಯೂರಪ್ಪ ಕುಟುಂಬ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಆರೋಪಿಸಿದರು.
BIG NEWS: ಸಿದ್ದರಾಮಯ್ಯ ಮುಂದಿನ ಸಿಎಂ ಎಂದು ʼಘೋಷಣೆʼ
ರಾಜ್ಯದಲ್ಲಿರುವುದು 20 ಟು 25 ಪರ್ಸೆಂಟ್ ಸರ್ಕಾರವಾಗಿದೆ. ಸಚಿವರ ಆಪ್ತ, ತಮ್ಮ ಹೆಸರಲ್ಲಿ, ವಿಜಯೇಂದ್ರ ಹೆಸರಲ್ಲಿ ವಂಚನೆ ಮಾಡುತ್ತಿರುವುದು ಶ್ರೀರಾಮುಲುಗೆ ಗೊತ್ತಿರಲಿಲ್ಲವೇ? ಅವರ ಬೆಂಬಲದಿಂದಲೇ ಡೀಲ್ ನಡೆಸಿರಬೇಕು. ತಪ್ಪು ಮಾಡಿದ ಮೇಲೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲೇಬೇಕು ಎಂದು ಹೇಳಿದರು.