ಬೆಂಗಳೂರು: ಬೆಂಗಳೂರಿನ ಹಲವೆಡೆಗಳಲ್ಲಿ ಇದ್ದಕ್ಕಿದ್ದಂತೆ ಭಾರಿ ಸ್ಫೋಟದ ಸದ್ದು ಕೇಳಿ ಬಂದಿದ್ದು, ರಾಜಧಾನಿ ಬೆಂಗಳೂರಿನ ಜನರು ಬೆಚ್ಚಿಬಿದ್ದಿದ್ದಾರೆ.
ಮಧ್ಯಾಹ್ನ 12:30ರ ವೇಳೆಗೆ ಆರ್.ಆರ್ ನಗರ, ನಾಗರಬಾವಿ, ಮಾಗಡಿ, ಬಿಡದಿ, ಬನಶಂಕರಿ, ಕುಮಾರಸ್ವಾಮಿ ಲೇಔಟ್ ಸೇರಿದಂತೆ ಹಲವೆಡೆಗಳಲ್ಲಿ ಭಾರಿ ಸ್ಫೋಟದ ಸದ್ದು ಕೇಳಿ ಬಂದಿದ್ದು, ಶಬ್ಧದ ತೀವ್ರತೆಗೆ ಕೆಲ ಸೆಕೆಂಡುಗಳ ಕಾಲ ಮನೆ ಬಾಗಿಲು, ಕಿಟಕಿಗಳು ಅಲುಗಾಡಿದ ಅನುಭವವಾಗಿದೆ.
ಭಯಂಕರ ಸದ್ದಿಗೆ ಕಂಗಾಲಾದ ಜನ ಮನೆಯಿಂದ ಹೊರಗೋಡಿ ಬಂದಿದ್ದಾರೆ. ಭೂಮಿಯ ಒಳಗಿನಿಂದ ಕೇಳಿಬಂದ ಸ್ಫೋಟದ ಸದ್ದಿನಂತಿದ್ದು, ಸಿಲಿಕಾನ್ ಸಿಟಿ ಜನರನ್ನು ಆತಂಕಕ್ಕೀಡುಮಾಡಿದೆ.