ಚಂದವಾಗಿ ಕಾಣುವ ಹೂವುಗಳನ್ನು ಮೂಸಿ ನೋಡಬೇಕು ಎನಿಸುವುದು ಅಸಹಜವೇನಲ್ಲ. ಆದರೆ ಕೆಲವೊಂದು ಅಂದದ ಹೂಗಳು ನಮಗೆ ಸುರಕ್ಷಿತವಲ್ಲದೇ ಇರಬಹುದು.
ಹೂವೊಂದರ ಸುಗಂಧ ಹೀರಲು ಹೊರಟಿದ್ದ ಯುವತಿಯೊಬ್ಬರು ನಿದ್ರಾರೋಗಕ್ಕೆ ಈಡಾಗುವುದರಲ್ಲಿದ್ದರು.
ಟಿಕ್‌ಟಾಕರ್ ಹಾಗೂ ಗೀತರಚನಾಕಾರ್ತಿ ರಫೆಲಾ ವೇಯ್ಮನ್ ’ಡೆವಿಲ್ಸ್ ಬ್ರೆತ್’ ಎಂದು ಕರೆಯಲಾಗುವ ಹೂವೊಂದರ ಘಮವನ್ನು ಮೂಗಿನಲ್ಲಿ ಹೀರಲು ಹೋಗಿದ್ದನ್ನು ವಿಡಿಯೋ ಮಾಡಿಕೊಂಡಿದ್ದಾರೆ. ಈ ಹೂವಿನ ವಾಸನೆ ಹೀರುವುದರಿಂದ ಪ್ರಜ್ಞೆ ಕಳೆದುಕೊಂಡು, ಕನಸಿನಲ್ಲಿ ಬೆಚ್ಚಿ ಬೀಳಿಸುವ ದೃಶ್ಯಗಳು ಕಲ್ಪನೆಯಲ್ಲಿ ಬರುತ್ತವೆ ಎಂದಿದ್ದಾರೆ ವೇಯ್ಮನ್.
ಕೋವಿಡ್ ವಿರುದ್ದ ಮಧುಮೇಹದ ಮದ್ದು ಪರಿಣಾಮಕಾರಿ….? ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ
ಮಾರಣಾಂತಿಕ ದ್ರವ್ಯ ’ಬುರುಂಡಂಗಾ’ದ ಮೂಲವಾದ ಈ ಹೂವನ್ನು ಮೂಸುವುದರಿಂದ ಪ್ರಜ್ಞೆ ತಪ್ಪುವುದಲ್ಲದೇ ಕೆಲವೊಮ್ಮೆ ಮಾರಣಾಂತಿಕ ಮಟ್ಟದಲ್ಲೂ ದುಷ್ಪರಿಣಾಮಗಳು ಆಗುವ ಸಾಧ್ಯತೆ ಇದೆ.
ನೇರ ಪ್ರಸಾರದ ವೇಳೆಯೇ ಎಡವಟ್ಟು ಮಾಡಿಕೊಂಡ ವರದಿಗಾರ್ತಿ
ತಮಗೆ ಅರಿವೇ ಇಲ್ಲದಂತೆ ಜಗತ್ತಿನಲ್ಲೇ ಅತ್ಯಂತ ಹೆಚ್ಚ ಭಯಪಡಲ್ಪಟ್ಟ ವಸ್ತುವೊಂದನ್ನು ಮೂಸಿ ನೋಡಲು ಹೋಗಿಬಿಟ್ಟಿದ್ದಾರೆ ವೇಯ್ಮನ್ ಹಾಗೂ ಆಕೆಯ ಸ್ನೇಹಿತೆ.
ಕೊಲೊಂಬಿಯಾ ಒಂದರಲ್ಲೇ ಈ ಹೂವಿನ ಸಹವಾಸದಿಂದ 50,000ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅಮೆರಿಕ ಆರೋಗ್ಯ ಇಲಾಖೆ ತಿಳಿಸುತ್ತದೆ.