ಅಮೆರಿಕದ 42ನೇ ಅಧ್ಯಕ್ಷರಾದ ಬಿಲ್ ಕ್ಲಿಂಟನ್ 1993-2001ರವರೆಗೂ ಶ್ವೇತಭವನದ ಗದ್ದುಗೆಯಲ್ಲಿದ್ದವರು.
ಬಿಲ್ ಕಾಸ್ಬಿ ಒಬ್ಬ ಸ್ಟಾಂಡ್-ಅಪ್ ಕಾಮೆಡಿಯನ್ ಆಗಿದ್ದು, ಹಲ್ಲೆ ಅಪರಾಧವೊಂದರಲ್ಲಿ ತಪ್ಪಿತಸ್ಥ ಎಂದು ಸಾಬೀತಾಗಿ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ತನಗೆ ನೀಡಲಾಗಿದ್ದ 3-10 ವರ್ಷಗಳ ಕಾರಾಗೃಹ ಶಿಕ್ಷೆಯಲ್ಲಿ ಎರಡು ವರ್ಷಗಳ ಶಿಕ್ಷೆ ಪೂರೈಸಿ ಜೂನ್ 30ರಂದು ಬಿಡುಗಡೆಯಾಗಿ ಹೊರಬಂದಿದ್ದಾನೆ ಕಾಬ್ಸಿ.
ಇಬ್ಬರಲ್ಲೂ ಮೊದಲ ಹೆಸರು ’ಬಿಲ್’ ಬಿಟ್ಟರೆ ಬೇರೇನೂ ಸಾಮ್ಯತೆ ಇಲ್ಲ. ಆದರೆ ಬಿಬಿಸಿ ಪತ್ರಕರ್ತರೊಬ್ಬರು ಇದನ್ನೇ ಗೊಂದಲ ಮಾಡಿಕೊಂಡು ನೇರ ಪ್ರಸಾರವೊಂದರ ವೇಳೆ ಭಾರೀ ಎಡವಟ್ಟು ಮಾಡಿದ್ದಾರೆ.
ಸುದ್ದಿ ನಿರೂಪಕಿ ಹವ್ ಎಡ್ವರ್ಡ್ಸ್ ಅವರು ಪತ್ರಕರ್ತೆ ಮೈಕೆಲ್ಲಿ ಫ್ಲಿಯುರಿ ಜೊತೆಗೆ ಮಾತನಾಡುವ ನೇರ ಪ್ರಸಾರದ ಈ ತುಣಿಕಿನಲ್ಲಿ ಮೈಕೆಲ್ಲಿ, “ಹೋ, ಕಳೆದ ಎರಡು ವರ್ಷಗಳಿಂದ ಬಿಲ್ ಕ್ಲಿಂಟನ್ ಇದನ್ನೇ ತಮ್ಮ ಮನೆ ಎಂದು ಕರೆದುಕೊಂಡಿದ್ದರು” ಎಂದು ಜೈಲಿನ ಮುಂದೆ ನಿಂತು ಹೇಳಿದ್ದಾರೆ.
ಶ್ರೀರಾಮಚಂದ್ರನ ಪಾದುಕೆಗಳಿಗೆ ಶೃಂಗೇರಿ ಶ್ರೀಗಳಿಂದ ಪೂಜೆ
ತನ್ನ ತಪ್ಪೇನು ಎಂದು ಅರಿವಾಗದೇ ಇದ್ದ ವರದಿಗಾತಿ ಕ್ಯಾಮೆರಾ ಮುಂದೆ ಹಾಗೇ ಮುಂದುವರೆದು, “ಪೆನ್ಸಿಲ್ವೇನಿಯಾ ಸುಪ್ರೀಂ ಕೋರ್ಟ್ನ ಆದೇಶದ ಮೂಲಕ ತಮ್ಮ ವಿರುದ್ಧ ಲೈಂಗಿಕ ಹಿಂಸಾಚಾರದ ಶಿಕ್ಷೆಯಿಂದ ಮುಕ್ತರಾದ ಅವರು ಇಂದು ರಾತ್ರಿ ತಮ್ಮ ಮನೆಯ ಹಾಸಿಗೆ ಮೇಲೆ ನಿದ್ರೆ ಮಾಡಲಿದ್ದಾರೆ” ಎಂದು ಹೇಳಿದ್ದಾರೆ.
ಬೆಳ್ಳಿ, ಚಿನ್ನಾಭರಣ ಖರೀದಿದಾರರಿಗೆ ಶಾಕಿಂಗ್ ನ್ಯೂಸ್
ಅದೃಷ್ಟವಶಾತ್ ಬಿಬಿಸಿ ಸ್ಟುಡಿಯೋದಲ್ಲಿದ್ದ ನಿರೂಪಕ ಕಾಸ್ಬಿ ಬದಲಿಗೆ ಕ್ಲಿಂಟನ್ ಎಂದಿದ್ದನ್ನು ಗಮನಿಸಿ ಕೂಡಲೇ ಅಪಾಲಜಿ ಕೇಳಿದ್ದರಿಂದ ದೊಡ್ಡ ಡ್ಯಾಮೇಜ್ ಆಗುವುದು ತಪ್ಪಿಹೋಗಿದೆ.