alex Certify BIG NEWS: ತಡವಾಗಿ ಬಯಲಾಯ್ತು ಅತಿ ದೊಡ್ಡ ರಹಸ್ಯ – ಟೀಂ ಇಂಡಿಯಾ ಆಟಗಾರರಿಗೆ ‘ಸೆಕ್ಸ್’ ಮಾಡಲು ಸಲಹೆ ನೀಡಿದ್ದರಂತೆ ಈ ಕೋಚ್​…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ತಡವಾಗಿ ಬಯಲಾಯ್ತು ಅತಿ ದೊಡ್ಡ ರಹಸ್ಯ – ಟೀಂ ಇಂಡಿಯಾ ಆಟಗಾರರಿಗೆ ‘ಸೆಕ್ಸ್’ ಮಾಡಲು ಸಲಹೆ ನೀಡಿದ್ದರಂತೆ ಈ ಕೋಚ್​…!

ಟೀಂ ಇಂಡಿಯಾದ ನಿವೃತ್ತ ಮೆಂಟಲ್​ ಕಂಡಿಷನಿಂಗ್​ ಕೋಚ್​​​ ಪಾಡ್ಯಾ ಉಪ್ಟನ್​​​ ತಂಡದ ಸದಸ್ಯರಿಗೆ ನೀಡಿದ ಸಲಹೆಯೊಂದು ತಡವಾಗಿ ಬೆಳಕಿಗೆ ಬಂದಿದ್ದು, ಇದನ್ನ ಕೇಳಿದ ಜನತೆ ಶಾಕ್​ ಆಗಿದ್ದಾರೆ.

ಭಾರತೀಯ ಕ್ರಿಕೆಟ್​ ಟೀಂನಲ್ಲಿ ಕೋಚ್​ ಆಗಿ ಸೇವೆ ಸಲ್ಲಿಸಿರುವ ಇವರು ಆಟಗಾರರಿಗೆ ಪಂದ್ಯಕ್ಕೂ ಮುನ್ನ ಸೆಕ್ಸ್ ಮಾಡಿ ಎಂದು ಸಲಹೆ ನೀಡಿದ್ದರಂತೆ..! ಪ್ಯಾಡಿ ಉಪ್ಟನ್​​ ತಮ್ಮ ಪುಸ್ತಕ ‘ದಿ ಬೇರ್​ಫೂಟ್​ ಕೋಚ್’​ ಎಂಬ ಪುಸ್ತಕದಲ್ಲಿ ಈ ವಿಚಾರವನ್ನ ಬಹಿರಂಗ ಪಡಿಸಿದ್ದಾರೆ.

ಉಪ್ಟನ್​ ನೀಡಿದ ಈ ಸಲಹೆಯನ್ನ ಕೇಳುತ್ತಿದ್ದಂತೆಯೇ ಮುಖ್ಯ ಕೋಚ್​ ಗ್ಯಾರಿ ಕ್ರಸ್ಟನ್ ಫುಲ್​ ಗರಂ ಆಗಿದ್ದರಂತೆ. ಗ್ಯಾರಿ ಕ್ರಸ್ಟನ್ ಟೀಂ ಇಂಡಿಯಾದ ಕೋಚ್​ ಆಗಿದ್ದ ವೇಳೆಯಲ್ಲಿ ಅಂದರೆ 2011ರಲ್ಲಿ ಟೀಂ ಇಂಡಿಯಾ ವಿಶ್ವ ಕಪ್​ ಪಂದ್ಯವನ್ನ ಗೆದ್ದಿತ್ತು ಅನ್ನೋದನ್ನ ನಾವಿಲ್ಲಿ ಸ್ಮರಿಸಬಹುದಾಗಿದೆ. ಗ್ಯಾರಿ ಗರಂ ಆಗುತ್ತಿದ್ದಂತೆಯೇ ಉಪ್ಟನ್​ ಈ ಸಲಹೆಗಾಗಿ ಕ್ಷಮೆ ಯಾಚಿಸಿದ್ದರಂತೆ.

ಮೆಂಟಲ್​ ಕಂಡಿಷನಿಂಗ್​ ಕೋಚ್​ ಆಗಿದ್ದ ಉಪ್ಟನ್​ ಈ ವಿಚಾರವಾಗಿ ಅನುಭವ ಹಂಚಿಕೊಂಡಿದ್ದು, ತಾವು ಈ ರೀತಿಯ ಸೆಕ್ಸ್ ಸಲಹೆ ನೀಡುತ್ತಿದ್ದಂತೆಯೇ ಗ್ಯಾರಿ ಕರ್ಸ್ನ್ ಆಕ್ರೋಶ ಹೊರಹಾಕಿದ್ರು. ಪ್ಯಾಡಿ ಪಂದ್ಯಕ್ಕೂ ಮುನ್ನ ಆಟಗಾರರು ಲೈಂಗಿಕ ಕ್ರಿಯೆ ನಡೆಸೋದು ಒಳ್ಳೆಯದು ಎಂದು ಹೇಳಿದ್ದರು. ಅಧ್ಯಯನವೊಂದನ್ನ ಆಧರಿಸಿ ಪ್ಯಾಡಿ ಈ ರೀತಿ ಸಲಹೆ ನೀಡಿದ್ದರಂತೆ.

ಬಳಿಕ ತಮ್ಮ ತಪ್ಪನ್ನ ಒಪ್ಪಿಕೊಂಡ ಪ್ಯಾಡಿ ಉಉಪ್ಟನ್, ಟೀಂ ಇಂಡಿಯಾ ಆಟಗಾರರಿಗೆ ಈ ರೀತಿ ಸೆಕ್ಸ್ ಸಲಹೆ ನೀಡಿದ್ದರಲ್ಲಿ ನನ್ನ ತಪ್ಪಿದೆ ಎಂದು ಹೇಳಿದ್ದಾರೆ. ಉಪ್ಟನ್​ ರಾಜಸ್ಥಾನ ರಾಯಲ್ಸ್ ತಂಡದ ಮುಖ್ಯ ಕೋಚ್​ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ಉಪ್ಟನ್​​ ತಮ್ಮ ಪುಸ್ತಕದಲ್ಲಿ ರಾಹುಲ್​ ದ್ರಾವಿಡ್​ ಹಾಗೂ ಗೌತಮ್ ಗಂಭೀರ್​ ಸೇರಿದಂತೆ ಎಲ್ಲಾ ಆಟಗಾರರನ್ನ ಸ್ಮರಿಸಿದ್ದಾರೆ. 2009ರಲ್ಲಿ ಆಡಲಾಗಿದ್ದ ಚಾಂಪಿಯನ್ ಟ್ರೋಫಿಗೂ ಮುನ್ನ ಮಾಡಬೇಕಾದ ತಯಾರಿಯ ಬಗ್ಗೆ ನೋಟ್ಸ್ ಮಾಡುತ್ತಿದ್ದೆ. ಈ ವೇಳೆ ತಾನು ಸೆಕ್ಸ್​ ಬಗ್ಗೆ ಉಲ್ಲೇಖಿಸಿದ್ದೆ ಎಂದು ಹೇಳಿದ್ದಾರೆ.

ಬೌಲರ್​ ಶ್ರೀಶಾಂತ್​ ವಿಚಾರವಾಗಿಯೂ ಮಾತನಾಡಿದ ಉಪ್ಟನ್, ಶ್ರೀಶಾಂತ್ ಹಿಂದೊಮ್ಮೆ ರಾಹುಲ್​ ದ್ರಾವಿಡ್​ರಿಗೆ ಬೈದು ಬಿಟ್ಟಿದ್ದರು ಎಂಬುದನ್ನ ಸ್ಮರಿಸಿದ್ರು. ಇದನ್ನ ಹೊರತುಪಡಿಸಿ ಧೋನಿಯನ್ನ ಹಾಡಿ ಹೊಗಳಿರುವ ಉಪ್ಟನ್​ ಶಾಂತ ರೀತಿಯಲ್ಲಿ ವರ್ತಿಸೋದೇ ಧೋನಿಯ ನಿಜವಾದ ಶಕ್ತಿಯಾಗಿದೆ. ಪಂದ್ಯ ಎಷ್ಟೇ ಕಠಿಣವಾಗಿದ್ರೂ ಸಹ ಧೋನಿ ಶಾಂತವಾಗಿ ಇರುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಹೇಳಿದ್ರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...