ನವದೆಹಲಿ: ಕೊರೋನಾ ಲಸಿಕೆ ಪಡೆಯುವುದರಿಂದ ಪುರುಷರು, ಮಹಿಳೆಯರ ಫಲವತ್ತತೆಗೆ ಧಕ್ಕೆಯಾಗುತ್ತದೆ ಎಂಬ ವದಂತಿ ಹರಡಿದೆ. ಪುರುಷರು ಮತ್ತು ಮಹಿಳೆಯರಲ್ಲಿ ಸಂತಾನಶಕ್ತಿಗೆ ಧಕ್ಕೆ ಆಗುತ್ತದೆ ಎಂಬ ವದಂತಿಗಳು ಹರಡುತ್ತಿದ್ದು, ಇದರ ಬಗ್ಗೆ ಕೇಂದ್ರದಿಂದ ಸ್ಪಷ್ಟನೆ ನೀಡಲಾಗಿದೆ.
ಲಸಿಕೆ ಪಡೆಯುವುದರಿಂದ ಪುರುಷರು ಮತ್ತು ಮಹಿಳೆಯರಲ್ಲಿ ಸಂತಾನಹರಣವಾಗುತ್ತದೆ ಎಂಬ ವದಂತಿಯನ್ನು ಕೇಂದ್ರ ಸರ್ಕಾರ ತಳ್ಳಿಹಾಕಿದ್ದು, ಲಸಿಕೆ ಸುರಕ್ಷಿತವಾಗಿದ್ದು, ಯಾವುದೇ ವದಂತಿಯನ್ನು ನಂಬಬಾರದು ಎಂದು ತಿಳಿಸಿದೆ.
ಕೊರೋನಾ ಲಸಿಕೆಯಿಂದ ಸಂತಾನ ಶಕ್ತಿ ಇಲ್ಲವಾಗುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ. ಮಕ್ಕಳಿಗೆ ಹಾಲುಣಿಸುವ ತಾಯಂದಿರು ಕೂಡ ಲಸಿಕೆಯನ್ನು ಪಡೆದುಕೊಳ್ಳಬಹುದು. ಅವರು ಲಸಿಕೆ ಪಡೆಯುವ ಮೊದಲು ಮತ್ತು ಲಸಿಕೆ ಪಡೆದುಕೊಂಡ ನಂತರ ಮಕ್ಕಳಿಗೆ ಹಾಲುಣಿಸಬಹುದು ಎಂದು ರಾಷ್ಟ್ರೀಯ ಲಸಿಕೆ ಆಡಳಿತ ತಜ್ಞರ ತಂಡ ಹೇಳಿದೆ. ಲಸಿಕೆ ಪಡೆಯಲು ಯಾವುದೇ ಹಿಂಜರಿಕೆ ಬೇಡ ಎಂದು ಕೇಂದ್ರ ಆರೋಗ್ಯ ಮಂತ್ರಾಲಯದಿಂದ ಮಾಹಿತಿ ನೀಡಲಾಗಿದೆ.