ಬೆಂಗಳೂರು: ಉದ್ಯೋಗದ ಆಸಕ್ತಿಯಿದ್ದರೂ ಕಂಪ್ಯೂಟರ್ ಜ್ಞಾನವಿಲ್ಲ ಎಂದು ಕೊರಗಬೇಕಿಲ್ಲ. ಕೊರೊನಾದಂತಹ ಆರ್ಥಿಕ ಮುಗ್ಗಟ್ಟಿನ ಸ್ಥಿತಿಯಲ್ಲಿ ಸಾವಿರಾರು ರೂಪಾಯಿ ಖರ್ಚು ಮಾಡಿ ಕಂಪ್ಯೂಟರ್ ಕಲಿಯುವುದಾದರೂ ಹೇಗೆ ಎಂಬ ಚಿಂತೆಯಲ್ಲಿದ್ದವರಿಗೆ ಇಲ್ಲಿದೆ ಸುವರ್ಣಾವಕಾಶ. ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಉಚಿತ ಕಂಪ್ಯೂಟರ್ ತರಬೇತಿಯನ್ನು ನೀಡಲಾಗುತ್ತಿದೆ.
ವಿದ್ಯಾರ್ಥಿಗಳಿಂದ ಹಿಡಿದು ವಯಸ್ಕರವರೆಗೂ ಆಸಕ್ತರಿಗೆ ಔದ್ಯೋಗಿಕ ನೆಲೆಗಟ್ಟು ಒದಗಿಸುವ ನಿಟ್ಟಿನಲ್ಲಿ ಆಂಗ್ಲ ಹಾಗೂ ಕನ್ನಡ ಡಿಪ್ಲೋಮಾ ಮಾದರಿಯ ಕಂಪ್ಯೂಟರ್ ತಂತ್ರಜ್ಞಾನ ಪೂರ್ಣಾವಧಿಯ ತರಬೇತಿಯನ್ನು ಬೆಂಗಳೂರಿನ ಮಲ್ಲೇಶ್ವರಂ ನ ಕನ್ನಡ ಕಂಪ್ಯೂಟರ್ ಫ್ರೀ ಟ್ರೇನಿಂಗ್ ಸೆಂಟರ್ ನಲ್ಲಿ ಉಚಿತವಾಗಿ ನೀಡಲಾಗುತ್ತಿದೆ.
ಕನ್ನಡದಲ್ಲಿ ನುಡಿ ತಂತ್ರಾಂಶ, M.S.Office (M S Word, M S Power Point, MS Excel) page Maker, Corel Draw, Graphic and Designs, Internet ಹಾಗೂ Tally ತರಬೇತಿಯನ್ನು ನೀಡಲಾಗುತ್ತದೆ. ಆಸಕ್ತರು ಈ ಕೆಳಗಿನ ವಿಳಾಸಕ್ಕೆ ನೇರವಾಗಿ ಬಂದು ಸಂಪರ್ಕಿಸಬಹುದು. ಇಲ್ಲವೆ E-mail ಹಾಗೂ ವಾಟ್ಸಪ್ ಮೂಲಕವೂ ದಾಖಲೆಗಳನ್ನು ಸಲ್ಲಿಸಿ ನೋಂದಾಯಿಸಿಕೊಳ್ಳಬಹುದು.
ಸಂಪರ್ಕಿಸುವ ವಿಳಾಸ:
ಕನ್ನಡ ಗಣಕ ಉಚಿತ ತರಬೇತಿ ಕೇಂದ್ರ
Kannada Computer Free Training Centre
6ನೇ ಅಡ್ಡರಸ್ತೆ, 5 ಹಾಗೂ 6ನೇ ಮುಖ್ಯ ರಸ್ತೆ ಮಧ್ಯ ಡಾ.ಹೋ.ಶ್ರೀನಿವಾಸಯ್ಯ ರಸ್ತೆ (ICICI BANK ಹಿಂಭಾಗದ ರಸ್ತೆ) ಜಯ ಅಪಾರ್ಟ್ ಮೆಂಟ್ ಪಕ್ಕ, BBMP GYM ಹತ್ತಿರ, ಮಲ್ಲೇಶ್ವರಂ, ಬೆಂಗಳೂರು-560003
ದೂರವಾಣಿ: 080 23561966
E-mail: Kannadacomputer.03@gmail.com