ಬೆಂಗಳೂರು; ಕಾರಣಾಂತರಗಳಿಂದ ಮುಂದೂಡಲ್ಪಟ್ಟಿದ್ದ ಎಸ್ ಡಿ ಎ (ದ್ವಿತೀಯ ದರ್ಜೆ ಸಹಾಯಕ) ಪರೀಕ್ಷೆಯ ಮರು ದಿನಾಂಕ ಘೋಷಣೆ ಮಾಡಲಾಗಿದ್ದು, ಎರಡು ದಿನ ಪರೀಕ್ಷೆ ನಡೆಯಲಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗ ತಿಳಿಸಿದೆ.
ಸೆಪ್ಟಂಬರ್ 18 ಹಾಗೂ ಸೆ.19ರಂದು ಪರೀಕ್ಷೆ ನಡೆಯಲಿದ್ದು, ಸೆ.18ರಂದು ಕನ್ನಡ ಭಾಷಾ ಪರೀಕ್ಷೆ ಹಾಗೂ ಸೆ.19ರಂದು ಸ್ಪರ್ಧಾತ್ಮಕ ವಿಷಯಗಳ ಪರೀಕ್ಷೆ ನಡೆಯಲಿದೆ ಎಂದು ಆಯೋಗ ತಿಳಿಸಿದೆ.
ಮಾರ್ಚ್ ನಲ್ಲಿ ನಡೆಯಬೇಕಿದ್ದ ಎಸ್ ಡಿ ಎ ಪರೀಕ್ಷೆ ಕಾರಣಾಂತರಗಳಿಂದ ಮುಂದೂಡಲ್ಪಟ್ಟಿತ್ತು. ಇದೀಗ ಮರು ದಿನಾಂಕ ಪ್ರಕಟಿಸಿ ಆಯೋಗ ಆದೇಶ ಹೊರಡಿಸಿದೆ.