alex Certify ಮಕ್ಕಳಿಗೆ ಕಾಡುವ ಕೊರೊನಾ ಬಗ್ಗೆ ಭಯ ಬೇಡ: ತಜ್ಞರು ನೀಡಿದ್ದಾರೆ ಈ ಸಲಹೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳಿಗೆ ಕಾಡುವ ಕೊರೊನಾ ಬಗ್ಗೆ ಭಯ ಬೇಡ: ತಜ್ಞರು ನೀಡಿದ್ದಾರೆ ಈ ಸಲಹೆ

ಕೊರೊನಾ ಒಂದ್ಕಡೆಯಾದ್ರೆ ಅದ್ರ ಬಗ್ಗೆ ತಪ್ಪು ಸುದ್ದಿಗಳು ಸಾಕಷ್ಟು ಹರಿದಾಡ್ತಿವೆ. ಇದು ಜನರಲ್ಲಿ ಆತಂಕ ಹುಟ್ಟಿಸಿದೆ. ಕೆಲ ವದಂತಿಗಳಿಗೆ ಸರ್ಕಾರ ಉತ್ತರ ನೀಡಿದೆ. ಎನ್‌ಐಟಿಐ ಆಯೋಗದ ಸದಸ್ಯ ಡಾ.ವಿ.ಕೆ.ಪೌಲ್, ಮಕ್ಕಳಿಗೆ ಸಂಬಂಧಿಸಿದ ಕೊರನಾ ಬಗ್ಗೆ ಮಾಹಿತಿ ನೀಡಿದ್ದಾರೆ. ಮಕ್ಕಳ ಚಿಕಿತ್ಸೆಗಾಗಿ ಸಾಕಷ್ಟು ಮೂಲಸೌಕರ್ಯಗಳ ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ. ಸಾಮಾನ್ಯವಾಗಿ ಮಕ್ಕಳಲ್ಲಿ ಕೊರೊನಾ ಲಕ್ಷಣ ರಹಿತವಾಗಿರುತ್ತದೆ. ಬಹಳ ಅಪರೂಪದ ಸಂದರ್ಭಗಳಲ್ಲಿ ಆಸ್ಪತ್ರೆಗೆ ದಾಖಲಾಗುವುದು ಅಗತ್ಯ ಇರುತ್ತದೆ ಎಂದು ಅವರು ತಿಳಿಸಿದ್ದಾರೆ.

ಕೊರೊನಾ ಬಗ್ಗೆ ಇರುವ ಕೆಲ ಪ್ರಶ್ನೆಗಳಿಗೆ ಕೋವಿಡ್ ಕಾರ್ಯ ಸಮೂಹದ ಅಧ್ಯಕ್ಷ ಡಾ.ಎನ್.ಕೆ.ಚೋಪ್ರಾ ಉತ್ತರ ನೀಡಿದ್ದಾರೆ. ಜೂನ್ 25 ರಿಂದ ಮಕ್ಕಳಲ್ಲಿ ಕೊವಾಕ್ಸಿನ್ ಪ್ರಯೋಗವನ್ನು ಪ್ರಾರಂಭಿಸಲಾಗಿದೆ. 2 ರಿಂದ 18 ವರ್ಷ ವಯಸ್ಸಿನ ಮಕ್ಕಳಲ್ಲಿ ಈ ಪ್ರಯೋಗಗಳನ್ನು ಮಾಡಲಾಗುತ್ತಿದೆ. ಇದರ ಫಲಿತಾಂಶಗಳು ಸೆಪ್ಟೆಂಬರ್-ಅಕ್ಟೋಬರ್ ವೇಳೆಗೆ ಬರಬಹುದು. ಮಕ್ಕಳಲ್ಲಿ ಸೋಂಕು ಉಂಟಾಗಬಹುದು. ಆದರೆ ಇದು ಸಾಮಾನ್ಯವಾಗಿ ಗಂಭೀರವಾಗಿರುವುದಿಲ್ಲ ಎಂದವರು ಹೇಳಿದ್ದಾರೆ.

ಮುಂಬರುವ ಕೊರೊನಾದ ಅಲೆಗಳನ್ನು ಎದುರಿಸಲು ಕೆಲವೊಂದು ನಿಯಮ ಪಾಲನೆ ಅನಿವಾರ್ಯವೆಂದು ಅವರು ಹೇಳಿದ್ದಾರೆ. ಮಾಸ್ಕ್, ಸ್ಯಾನಿಟೈಜರ್ ಬಳಕೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮುಖ್ಯವೆಂದು ಅವರು ಸೂಚನೆ ನೀಡಿದ್ದಾರೆ. ದೇಶದಲ್ಲಿ ಹೆಚ್ಚುತ್ತಿರುವ ಡೆಲ್ಟಾ + ರೂಪಾಂತರದ ಪ್ರಕರಣಗಳ ನಡುವೆ ಮೂರನೇ ಅಲೆ ಬರುವ ಸಾಧ್ಯತೆಯಿದೆ ಎಂದವರು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...