alex Certify ಕೋವಿಡ್​ ರೋಗಿಗಳಿಂದ ಸುಲಿಗೆ ಮಾಡಿದ ಆಸ್ಪತ್ರೆಗಳಿಗೆ ತಕ್ಕ ಪಾಠ: ಹೆಚ್ಚುವರಿ ಹಣ ವಾಪಾಸ್‌ ಮಾಡಿಸಿದ ಡಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್​ ರೋಗಿಗಳಿಂದ ಸುಲಿಗೆ ಮಾಡಿದ ಆಸ್ಪತ್ರೆಗಳಿಗೆ ತಕ್ಕ ಪಾಠ: ಹೆಚ್ಚುವರಿ ಹಣ ವಾಪಾಸ್‌ ಮಾಡಿಸಿದ ಡಿಸಿ

ಕೋವಿಡ್​ 19 ಚಿಕಿತ್ಸೆ ಹೆಸರಲ್ಲಿ ದುಬಾರಿ ಶುಲ್ಕ ವಸೂಲಿ ಮಾಡುವ ಆಸ್ಪತ್ರೆಗಳ ವಿರುದ್ಧ ರೋಗಿಯ ಕುಟುಂಬಸ್ಥರು ನೀಡಿದ ದೂರನ್ನ ಆಧರಿಸಿ ವಿಚಾರಣೆ ನಡೆಸಿದ ಹರಿಯಾಣದ ಪಂಚಕುಲ ಡೆಪ್ಯೂಟಿ ಕಮಿಷನರ್​ ವಿನಯ್​ ಪ್ರತಾಪ್​ ಸಿಂಗ್​​, ರೋಗಿಗಳ ಕುಟುಂಬಕ್ಕೆ ಮಂಗಳವಾರ ಚೆಕ್​ಗಳನ್ನ ಹಸ್ತಾಂತರಿಸಿದರು. ರೋಗಿಗಳ ಕುಟುಂಬಕ್ಕೆ ಡೆಪ್ಯೂಟಿ ಕಮಿಷನರ್​ ಹಸ್ತಾಂತರಿಸಿದ ಒಟ್ಟು ಚೆಕ್​ ಮೌಲ್ಯ 21 ಲಕ್ಷ ರೂಪಾಯಿ ಆಗಿದೆ.

ಈ ಚೆಕ್​ಗಳನ್ನ ಪಾರಸ್​ ಆಸ್ಪತ್ರೆ, ಅಲ್​​ಕೆಮಿಸ್ಟ್​ ಆಸ್ಪತ್ರೆ ಹಾಗೂ ವಿಂಗ್​ ಆಸ್ಪತ್ರೆ ಪ್ರತಿನಿಧಿಗಳು ರೋಗಿಗಳ ಕುಟುಂಬಕ್ಕೆ ಹಸ್ತಾಂತರಿಸಬೇಕಿತ್ತು. ಆದರೆ ಸಂತ್ರಸ್ತ ಕುಟುಂಬಗಳು ಇವರ ಕೈನಿಂದ ಚೆಕ್​ ಪಡೆಯಲು ನಿರಾಕರಿಸಿದ ಹಿನ್ನೆಲೆ ವಿನಯ್​ ಪ್ರತಾಪ್​ ಸಿಂಗ್​​ರೇ ಈ ಚೆಕ್​ಗಳನ್ನ ನೀಡಿದ್ರು ಎಂದು ತನಿಖಾ ಸಮಿತಿ ಸದಸ್ಯ ಬಿಬಿ ಸಿಂಘಲ್​ ಹೇಳಿದ್ರು.

ಪಾರಸ್​ ಆಸ್ಪತ್ರೆ 13 ರೋಗಿಗಳಿಗೆ 12.91 ಲಕ್ಷ ರೂಪಾಯಿ, ಅಲ್​ಕೆಮಿಸ್ಟ್​​ ಆಸ್ಪತ್ರೆಯು 6 ರೋಗಿಗಳಿಗೆ 6.39 ಲಕ್ಷ ರೂಪಾಯಿ ಹಣವನ್ನ ಮರುಪಾವತಿ ಮಾಡಿದೆ.

ವಿಂಗ್ಸ್ ಆಸ್ಪತ್ರೆಯು ಮೂವರು ರೋಗಿಗಳಿಗೆ 1.77 ಲಕ್ಷ ರೂಪಾಯಿ ಮರುಪಾವತಿ ಮಾಡಿದೆ. ಈ ಮೂರು ಆಸ್ಪತ್ರೆಗಳಿಗೆ ಏಪ್ರಿಲ್​ 1ರಿಂದ ಮೇ 15ರೊಳಗಿನ ಎಲ್ಲಾ ಬಿಲ್​ಗಳನ್ನ ಜುಲೈ 30ರ ಒಳಗಾಗಿ ಲೆಕ್ಕಪರಿಶೋಧನೆ ಮಾಡುವಂತೆ ಸೂಚನೆ ನೀಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...