ಬೆಂಗಳೂರು: ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಭೇಟಿ ನೀಡಿದ್ದರ ಬಗ್ಗೆ ಲೇವಡಿ ಮಾಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಅವರೇನು ಪ್ರಧಾನಮಂತ್ರಿನಾ? ಅಷ್ಟೊಂದು ಬಿಲ್ಡಪ್ ಕೊಡಲು? ಅವರು ಬರುವಾಗಲೇ ಗೊತ್ತಿತ್ತು ಏನ್ ಹೇಳ್ತಾರೆ ಎಂದು ಅದಕ್ಕೆ ಭೇಟಿ ಮಾಡಿಲ್ಲ ಎಂದು ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಯತ್ನಾಳ್, ಅರುಣ್ ಸಿಂಗ್ ರಾಜ್ಯಕ್ಕೆ ಭೇಟಿ ನೀಡುವಾಗಲೇ ಗೊತ್ತಿತ್ತು, ನಾಯಕತ್ವ ಬದಲಾವಣೆ ವಿಚಾರವಾಗಿ ಅವರು ಏನು ಹೇಳುತ್ತಾರೆ ಎಂದು. ಗೊತ್ತಿದ್ದೇ ಅವರನ್ನು ಭೇಟಿಯಾಗಿಲ್ಲ. ಏರ್ ಪೋರ್ಟ್ ಗೆ ಬಂದಿದ್ದೇನು, ಕೆ.ಕೆ.ಗೆಸ್ಟ್ ಹೌಸ್ ನಲ್ಲಿ ಕೈಬೀಸಿದ್ದೇನು, ಆ ಲೆವಲ್ ಗೆ ಬಿಲ್ಡಪ್ ಕೊಡಲು ಅವರೇನು ಪ್ರಧಾನಮಂತ್ರಿನಾ? ಏನ್ ಹೇಳ್ತಾರೆ ಎಂಬುದನ್ನು ಏರ್ ಪೋರ್ಟ್ ನಲ್ಲೇ ಹೇಳಿದ್ರು. ಇಲ್ಲಿ ಬಂದು ಅಭಿಪ್ರಾಯ ಕೇಳಿದಂತೆ ಮಾಡಿ ವರಿಷ್ಠರಿಗೆ ವರದಿ ಒಪ್ಪಿಸ್ತಾರೆ ಅಷ್ಟೆ ಎಂದು ವ್ಯಂಗ್ಯವಾಡಿದರು.
Good News: ನಾಳೆಯಿಂದ ಮೆಟ್ರೋ ಸಂಚಾರ ಅವಧಿ ವಿಸ್ತರಣೆ
ಇದೇ ವೇಳೆ ಸಿಎಂ ಬಿ ಎಸ್ ವೈ ಹಾಗೂ ವಿಜಯೇಂದ್ರ ಬಗ್ಗೆಯೂ ಮತ್ತೆ ಕಿಡಿಕಾರಿರುವ ಯತ್ನಾಳ್, ಹಾಲಿ ಸಿಎಂಗಳು ಜೈಲಿಗೆ ಹೋಗಿರುವ ಇತಿಹಾಸವಿದೆ. ಆ ಇತಿಹಾಸ ಮತ್ತೆ ಮರುಕಳಿಸಬಾರದು. ನಮ್ಮ ಪ್ರಧಾನಿಗಳು ಭ್ರಷ್ಟಾಚಾರ ಸಹಿಸಲ್ಲ ಎಂಬ ವಿಶ್ವಾಸವಿದೆ. ವಿಜಯೇಂದ್ರ ಎಲ್ಲರನ್ನೂ ಮ್ಯಾನೇಜ್ ಮಾಡ್ತಿದ್ದಾರೆ. ಪದೇ ಪದೇ ತಪ್ಪು ಮಾಡಿದರೆ ಸಹಿಸುವುದಿಲ್ಲ. ದುಷ್ಟರಿಗೂ ಕಾಲ ಇರುತ್ತೆ ಆದರೆ ಪದೇ ಪದೇ ನಡೆಯಲ್ಲ. ಎಲ್ಲದಕ್ಕೂ ಕಾಲ ಕೂಡಿಬರಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.