ವೇಗವಾಗಿ ಬೆಳೆಯುತ್ತಿರುವ ಸೋಶಿಯಲ್ ಮೀಡಿಯಾ ವೇದಿಕೆಗಳಿಂದಾಗಿ ವಿದೇಶಿಗರು ಕೂಡ ಭಾರತೀಯ ಸಿನಿಮಾಗಳ ಹಾಡಿಗೆ ಪ್ರದರ್ಶನ ನೀಡುತ್ತಿದ್ದಾರೆ. ಹಾಡಿನ ಸಾಲುಗಳು ಅರ್ಥವಾಗದೇ ಇದ್ದರೂ ಸಹ ಭಾರತದ ಕಡೆ ಇವರು ತೋರಿಸುವ ಒಲವು ದೇಶಿ ನೆಟ್ಟಿಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗ್ತಿದೆ.
ಇದೇ ಸಾಲಿಗೆ ಮತ್ತೊಂದು ಸೇರ್ಪಡೆ ಎಂಬಂತೆ ಡೆನ್ಮಾರ್ಕ್ ರಾಜಧಾನಿ ಕೋಪನ್ ಹೇಗನ್ನಲ್ಲಿ ವಿದೇಶಿಗರು ಸೂಪರ್ ಸ್ಟಾರ್ ರಜನಿಕಾಂತ್ ಸಿನಿಮಾ ಹಾಡಿಗೆ ದನಿಯಾಗಿದ್ದು ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ತಮ್ಮ ಸೋಶಿಯಲ್ ಮೀಡಿಯಾ ವೇದಿಕೆಯಲ್ಲಿ ಈ ಪೋಸ್ಟ್ ನ್ನು ಶೇರ್ ಮಾಡಿದ್ದಾರೆ. ಇದರಲ್ಲಿ ಕೋಪನ್ ಹೇಗನ್ ಬೀದಿಯಲ್ಲಿ ನಿಂತ ವಿದೇಶಿಗರು ಹಾಡನ್ನ ಹಾಡಿದ್ದಾರೆ. ಈ ವಿಡಿಯೋ ದೇಶಿ ನೆಟ್ಟಿಗರ ಮನಗೆದ್ದಿದೆ.
2007ರಲ್ಲಿ ತೆರೆಕಂಡ ತಮಿಳು ಸಿನಿಮಾ ʼಶಿವಾಜಿ ದ ಬಾಸ್ʼ ಸಿನಿಮಾದ ಹಾಡಾಗಿದೆ. ಇದಕ್ಕೆ ದಿವಂಗತ ನಾ. ಮುತ್ತುಕುಮಾರ್ರ ಸಾಹಿತ್ಯವಿದ್ದರೆ ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ರ ಸಂಗೀತ ಸಂಯೋಜನೆ ಇದೆ. ಈ ಹಾಡಿಗೆ ಖ್ಯಾತ ಗಾಯಕ ದಿವಂಗತ ಎಸ್.ಪಿ. ಬಾಲಸುಬ್ರಮಣ್ಯಂ ದನಿಯಾಗಿದ್ದಾರೆ.
https://twitter.com/i/status/1409545706679914496