ಉಡುಪಿ: ಫರ್ನೇಸ್ ಆಯಿಲ್ ದಂಧೆ ನಡೆಸುತ್ತಿದ್ದ ಬೃಹತ್ ಆಯಿಲ್ ಮಾಫಿಯಾ ಭೇದಿಸಿರುವ ದಕ್ಷಿಣ ಕನ್ನಡ ಜಿಲ್ಲೆ ಪೊಲೀಸರು 8 ಆರೋಪಿಗಳನ್ನು ಬಂಧಿಸಿದ್ದಾರೆ.
ರಘುನಾಥ್, ಮುತ್ತು ಪಾಂಡಿ, ಜಿ. ದಾಸ್, ಸಿಂಗರಾಜ್, ಎಸ್. ಕಾರ್ತಿ, ಸೆಲ್ವರಾಜ್ ಸೇರಿದಂತೆ ಒಟ್ಟು 8 ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ಟ್ಯಾಂಕರ್ ಚಾಲಕರೊಂದಿಗೆ ಒಪ್ಪಂದ ಮಾಡಿಕೊಂಡು ದಂಧೆ ನಡೆಸುತ್ತಿದ್ದರು.
ತೂಕ ಇಳಿಸಿಕೊಳ್ಳಲು ನೆರವಾಗುತ್ತೆ ವಿಶಿಷ್ಟ ಡಿವೈಸ್
ಖಚಿತ ಮಾಹಿತಿ ಪಡೆದ ಪೊಲೀಸರು ಕೌಕ್ರಾಡಿ ಬಳಿಯ ಮಣ್ಣುಗುಂಡಿ ಸಮೀಪ 2 ಟ್ಯಾಂಕ್ ಗಳಲ್ಲಿದ್ದ 10,500 ಲೀಟರ್ ಆಯಿಲ್ ಜಪ್ತಿಮಾಡಿದ್ದು, ಒಟ್ಟು 35,21,400 ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.