ವಿಜಯನಗರ: ಕೊರೊನಾ ಎರಡನೇ ಅಲೆ ಆರ್ಭಟ ಕೊಂಚ ತಣ್ಣಗಾಗಿದ್ದರೂ ಸಾವಿನ ಸರಣಿ ಇನ್ನೂ ಮುಂದುವರೆದಿದೆ. ಕೋವಿಡ್ ನಿಂದ ಬಳಲುತ್ತಿದ್ದ ಪಿ ಎಸ್ ಐ ಓರ್ವರು ನಿವೃತ್ತಿಗೆ ಒಂದು ದಿನ ಮೊದಲು ಸಾವನ್ನಪ್ಪಿರುವ ಘಟನೆ ವಿಜಯನಗರದಲ್ಲಿ ನಡೆದಿದೆ.
ಪ್ರತಿ ದಿನ 7 ರೂ. ಉಳಿಸಿ ತಿಂಗಳಿಗೆ ಪಡೆಯಿರಿ 5 ಸಾವಿರ ರೂ.
ಕಳೆದ 15 ದಿನಗಳಿಂದ ಯಲ್ಲಪ್ಪ ಕದ್ರಳ್ಳಿ (60) ಕೊರೊನಾ ಸೋಂಕಿನಿಂದ ಬಳಲುತಿದ್ದರು. ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇದೀಗ ಕೊನೆಯುಸಿರೆಳೆದಿದ್ದಾರೆ.
ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯ ಪಿ ಎಸ್ ಐ ಆಗಿದ್ದ ಯಲ್ಲಪ್ಪ ಕದ್ರಳ್ಳಿ ಇಂದು ನಿವೃತ್ತಿಯಾಗಬೇಕಿದ್ದರು.