alex Certify ಹವಾಮಾನ ಬದಲಾವಣೆ ಎಫೆಕ್ಟ್‌: ಸಾಗರ ಸೇರಿದ ಅಂಟಾರ್ಕ್ಟಿಕಾದ ಬೃಹತ್ ಕೆರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹವಾಮಾನ ಬದಲಾವಣೆ ಎಫೆಕ್ಟ್‌: ಸಾಗರ ಸೇರಿದ ಅಂಟಾರ್ಕ್ಟಿಕಾದ ಬೃಹತ್ ಕೆರೆ

Huge Antarctic Lake Disappeared Into the Ocean Within a Week Due to Climate Change, Study Finds

ಅಂಟಾರ್ಕ್ಟಿಕಾದಲ್ಲಿ ಜೂನ್ 2019ರಲ್ಲಿ ಹೆಪ್ಪುಗಟ್ಟಿದ ಕೆರೆಯೊಂದು ನಾಪತ್ತೆಯಾಗಿತ್ತು. ಇದೀಗ ಆ ಕೆರೆಯನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದು, ಈ ಕೆರೆಯು 600-750 ಕ್ಯುಬಿಕ್ ಮೀಟರ್‌ಗಳಷ್ಟು ದೊಡ್ಡದಿದೆ ಎಂದು ಅಂದಾಜಿಸಲಾಗಿದೆ.

ಕಾಶ್ಮೀರದ ಪ್ರಖ್ಯಾತ ದಾಲ್ ಸರೋವರದ ಅರ್ಧದಷ್ಟು ವಿಸ್ತೀರ್ಣ ಈ ಕೆರೆ ಇದ್ದು, ಪೂರ್ವ ಅಂಟಾರ್ಕ್ಟಿಕಾದಲ್ಲಿದ್ದು, 11 ಚದರ ಕಿಲೋಮೀಟರ್‌ನಷ್ಟು ವಿಸ್ತಾರವಾಗಿದೆ. ಈ ಕೆರೆಯು ಅಂಟಾರ್ಕ್ಟಿಕ್ ಸಾಗರಕ್ಕೆ ಕರಗಿ ತೇಲಿಕೊಂಡಿದೆ.

ಮತ್ತೆ ಆಕ್ಟಿವ್ ಆಯ್ತಾ ಸಿಎಂ ವಿರೋಧಿ ಬಣ…? ಯತ್ನಾಳ್ ಜೊತೆ ನಾನಿರುತ್ತೇನೆ ಎಂದ್ರು ಸಿ.ಪಿ. ಯೋಗೇಶ್ವರ್

ಈ ಕೆರೆಯಲ್ಲಿ ತುಂಬಿಕೊಂಡಿದ್ದ ನೀರಿನ ತೂಕಕ್ಕೆ ಕೆರೆಯ ತಳದಲ್ಲಿ ಕುಳಿ ತೆರೆದುಕೊಂಡಿದ್ದು, ಈ ಕ್ರಿಯೆಗೆ ಹೈಡ್ರೋಫ್ರಾಕ್ಚರ್‌ ಎನ್ನುತ್ತಾರೆ. ಇದರಿಂದಾಗಿ ನೀರು ಹತ್ತಿರದ ಸಾಗರ ಸೇರುತ್ತದೆ ಎನ್ನುತ್ತಾರೆ ಹಿಮಗಳ ಅಧ್ಯಯನ ಮಾಡುವ ತಜ್ಞ ರೋಲಾಂಡ್ ವಾರ್ನರ್‌.

ವ್ಯವಹಾರದ ಯಶಸ್ಸಿಗೆ ಏನು ಮಾಡ್ಬೇಕು ಗೊತ್ತಾ….?

ಈ ರೀತಿಯ ಹೈಡ್ರೋಫ್ರಾಕ್ಚರ್‌ಗಳ ಕಾರಣ ಸಾಗರಗಳಲ್ಲಿ ನೀರಿನ ಮಟ್ಟ ಏರಿಕೆಯಾಗಲಿದೆ ಎಂಬುದು ವಿಜ್ಞಾನಿಗಳ ಆತಂಕ. ಅಂಟಾರ್ಕ್ಟಿಕಾದಲ್ಲಿ ಹವೆಯು ದಿನೇ ದಿನೇ ಬಿಸಿಯಾಗುತ್ತಿರುವ ಕಾರಣ ಹೀಗೆ ಆಗುತ್ತಿದೆ ಎನ್ನಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...