ಲಂಡನ್ನ ರೈಲು ನಿಲ್ದಾಣವೊಂದರಲ್ಲಿ ಅಗ್ನಿ ಅನಾಹುತ ಸಂಭವಿಸಿ, ಬೆಂಕಿಗೆ ಸಿಗಲಿದ್ದ ಇಬ್ಬರು ಮಕ್ಕಳನ್ನು ರಕ್ಷಿಸಿದ ಪೊಲೀಸ್ ಸಿಬ್ಬಂದಿಯೊಬ್ಬರು ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ತನ್ನ ಕೈಗಳಲ್ಲಿ ಮಕ್ಕಳನ್ನು ಎತ್ತಿಕೊಂಡು ಸುರಕ್ಷಿತ ಸ್ಥಳಕ್ಕೆ ಓಡುತ್ತಿರುವ ಪೊಲೀಸ್ ಅಧಿಕಾರಿಯ ವಿಡಿಯೋ ವೈರಲ್ ಆಗಿದೆ.
ಹಿತಮಿತವಾದ ʼಆಹಾರʼ ಸದೃಢ ಆರೋಗ್ಯಕ್ಕೆ ಸರಳ ಮಾರ್ಗ
ನಗರದ ಎಲಿಫೆಂಟ್ & ಕ್ಯಾಸಲ್ ರೈಲ್ವೇ ನಿಲ್ದಾಣದಲ್ಲಿ ಸಂಭವಿಸಿದ ಅಗ್ನಿ ಅನಾಹುತವನ್ನು ನಿಯಂತ್ರಣಕ್ಕೆ ತರಲು 15 ಫೈರ್ ಎಂಜಿನ್ಗಳು ಹಾಗು ನೂರಾರು ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದರು.
ಅಗ್ನಿ ಅನಾಹುತಕ್ಕೆ ಕಾರಣವೇನೆಂದು ಇನ್ನೂ ತಿಳಿದು ಬಂದಿಲ್ಲ. ಈ ಅವಘಡದ ಹಿಂದೆ ಭಯೋತ್ಪಾದಕರ ಕೈವಾಡವಿರಬಹುದು ಎಂದು ಲಂಡನ್ ಮೆಟ್ರೋಪೊಲಿಟನ್ ಪೊಲೀಸರು ಶಂಕಿಸಿದ್ದಾರೆ.
https://twitter.com/CAM0zUK/status/1409508165549502477?ref_src=twsrc%5Etfw%7Ctwcamp%5Etweetembed%7Ctwterm%5E1409508165549502477%7Ctwgr%5E%7Ctwcon%5Es1_&ref_url=https%3A%2F%2Fwww.timesnownews.com%2Fthe-buzz%2Farticle%2Fcop-rescues-2-children-from-burning-train-station-watch%2F777562