ಕೋವಿಡ್-19 ಲಸಿಕೆ ಪಾಸ್‌ಪೋರ್ಟ್‌ನಲ್ಲಿ ಕೋವಿಶೀಲ್ಡ್ ಅನ್ನು ಮಾನ್ಯೀಕರಿಸಲು ಯಾವುದೇ ಮನವಿ ಐರೋಪ್ಯ ಒಕ್ಕೂಟದ ಮುಂದೆ ಬಂದಿಲ್ಲ ಎಂದು ಐರೋಪ್ಯ ಮದ್ದು ಏಜೆನ್ಸಿ (ಇಎಂಎ) ತಿಳಿಸಿದೆ.
“ಕೋವಿಶೀಲ್ಡ್‌ಗೆ ಇಎಂಎ ಮಾನ್ಯೀಕರಣದ ವಿಚಾರವಾಗಿ ಯಾವುದೇ ಮನವಿ ಬಂದಲ್ಲಿ ಪರಿಶೀಲನೆ ಮಾಡಿ ನೋಡಲಿದೆ. ಸಂಬಂಧಿಸಿದ ಕಂಪನಿಗಳ ಮನವಿ ಇಲ್ಲದೇ ಇದ್ದಲ್ಲಿ ಯಾವುದೇ ಹೊಸ ಮದ್ದುಗಳನ್ನು ಇಎಂಎ ತನ್ನದೇ ಸಾಮರ್ಥ್ಯದಲ್ಲಿ ಮದ್ದುಗಳ ಪರಿಶೀಲನೆ ಮಾಡುವುದಿಲ್ಲ” ಎಂದು ಐರೋಪ್ಯ ಒಕ್ಕೂಟದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜೇಡದ ಹೊಸ ತಳಿಗೆ 26/11 ಹುತಾತ್ಮ ತುಕಾರಂ ಒಂಬಳೆ ಹೆಸರು
ಐರೋಪ್ಯ ಒಕ್ಕೂಟದ ’ಲಸಿಕೆ ಪಾಸ್‌ಪೋರ್ಟ್’ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಯೂರೋಪ್‌ಗೆ ತೆರಳಲು ಕೋವಿಶೀಲ್ಡ್ ಲಸಿಕೆ ಪಡೆದ ಅನೇಕ ಭಾರತೀಯರು ಪರದಾಡುತ್ತಿರುವ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ಬಂದಿದೆ.
ಪುಣೆ ಮೂಲದ ಸೀರಂ ಸಂಸ್ಥೆಯ ಕೋವಿಶೀಲ್ಡ್ ಲಸಿಕೆಗೆ ಐರೋಪ್ಯ ಒಕ್ಕೂಟದ ಮಾನ್ಯತೆ ಇಲ್ಲದೇ ಇರುವ ಕಾರಣ, ’ಗ್ರೀನ್ ಪಾಸ್’ ಯೋಜನೆಯಡಿ ಕೋವಿಶೀಲ್ಡ್ ಲಸಿಕೆ ಪಡೆದ ಮಂದಿ ಯೂರೋಪ್‌ಗೆ ಸದ್ಯದ ಮಟ್ಟಿಗೆ ಹೋಗುವುದು ಕಷ್ಟವಾಗಿದೆ.
ಭಾರತದಲ್ಲಿ ಕೋವಿಡ್-19 ವಿರುದ್ಧ ಬಳಸಲು ಅನುಮತಿ ಕೊಡಲಾದ ಮೂರು ಲಸಿಕೆಗಳಲ್ಲಿ ಕೋವಿಶೀಲ್ಡ್ ಸಹ ಒಂದಾಗಿದೆ.