alex Certify ಪಾನ್ – ಆಧಾರ್‌ ಲಿಂಕ್ ಆಗಿದೆಯೇ…? ಖಚಿತಪಡಿಸಿಕೊಳ್ಳಲು ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾನ್ – ಆಧಾರ್‌ ಲಿಂಕ್ ಆಗಿದೆಯೇ…? ಖಚಿತಪಡಿಸಿಕೊಳ್ಳಲು ಇಲ್ಲಿದೆ ಮಾಹಿತಿ

ಶಾಶ್ವತ ಖಾತೆ ಸಂಖ್ಯೆ (ಪಾನ್) ಹಾಗೂ ಆಧಾರ್‌ ಲಿಂಕಿಂಗ್ ಮಾಡಲು ಸೆಪ್ಟೆಂಬರ್‌ 30ರವರೆಗೆ ಕಡೆಯ ದಿನಾಂಕವನ್ನು ವಿಸ್ತರಿಸಲಾಗಿದೆ. ಕೋವಿಡ್-19 ಎರಡನೇ ಅಲೆಯ ಹೊಡೆತದ ಪರಿಣಾಮ ಆದಾಯ ತೆರಿಗೆ ಇಲಾಖೆ ಜೂನ್ 30ಕ್ಕೆ ಇದ್ದ ಡೆಡ್‌ಲೈನ್‌ ಅನ್ನು ಸೆಪ್ಟೆಂಬರ್‌ ಅಂತ್ಯದವರೆಗೂ ವಿಸ್ತರಿಸಿದೆ.

ಆದಾಯ ತೆರಿಗೆ ಕಾಯಿದೆಯ 139 ಎಎ ಸೆಕ್ಷನ್ ಪ್ರಕಾರ, ಜುಲೈ 1, 2017ರಂತೆ ಪಾನ್ ಹೊಂದಿರುವ ಪ್ರತಿಯೊಬ್ಬರೂ ಸಹ ಆಧಾರ್‌ ಪಡೆಯಲು ಅರ್ಹರಿದ್ದು, ಮುಂದಿನ ದಿನಗಳಲ್ಲಿ ಪಾನ್‌ಗೆ ಆಧಾರ್‌ ಲಿಂಕಿಂಗ್ ಆಗದೇ ಇದ್ದಲ್ಲಿ ಪಾನ್ ಕಾರ್ಡ್ ನಿಷ್ಕ್ರಿಯವಾಗಲಿದೆ.

ನಿಮ್ಮ ಪಾನ್‌ ಹಾಗೂ ಆಧಾರ್‌ ಲಿಂಕಿಂಗ್ ಆಗಿದೆಯೇ ಎಂದು ಅರಿಯಲು ಹೀಗೆ ಮಾಡಿ:

* www.incometax.gov.in ಜಾಲತಾಣಕ್ಕೆ ಭೇಟಿ ಕೊಡಿ.

* ಅಲ್ಲಿ ‘Our Services’ಗೆ ಭೇಟಿ ಕೊಟ್ಟು, ಹೋಂ ಪೇಜ್‌ನಲ್ಲಿ ‘Link Aadhaar’ ಆಯ್ದುಕೊಳ್ಳಿ.

* ಬಳಿಕ ‘Link Aadhaar Know About your Aadhaar PAN linking Status’ ಆಯ್ಕೆ ಮೇಲೆ ಕ್ಲಿಕ್ ಮಾಡಿ.

* ಇದು ಹೊಸ ಪೇಜ್‌ ತೆರೆಯಲಿದೆ. ಇದಾದ ಬಳಿಕ ಪಾನ್ ಹಾಗೂ ಆಧಾರ್‌ ಕಾರ್ಡ್ ವಿವರಗಳನ್ನು ಇದಕ್ಕೆಂದೇ ಕೊಡಲಾದ ಬಾಕ್ಸ್‌ನಲ್ಲಿ ಸೇರಿಸಿ.

* ವಿವರಗಳನ್ನು ಭರ್ತಿ ಮಾಡಿದ ಮೇಲೆ, ‘View Link Aadhaar Status’ ಕ್ಲಿಕ್ ಮಾಡಿ.

* ಇದಾದ ಮೇಲೆ ಆಧಾರ್‌-ಪಾನ್‌ನ ಸ್ಟೇಟಸ್ ಪೇಜ್‌ ಮೇಲೆ ನೋಡಲು ಸಿಗಲಿದೆ. ಉದಾಹರಣೆ: Your PAN (PAN Aadhaar) is linked to an

Aadhaar number (Aadhar Number) if they are linked ಎಂದು ಪೇಜ್ ಮೇಲೆ ಬರಲಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...