ನವದೆಹಲಿ: ಜುಲೈ 31 ರೊಳಗೆ, ವಲಸೆ ಕಾರ್ಮಿಕರಿಗೆ ಒನ್ ನೇಷನ್ ಒನ್ ರೇಷನ್ ಯೋಜನೆಯನ್ನು ಜಾರಿಗೆ ತರಬೇಕೆಂದು ಸುಪ್ರೀಂಕೋರ್ಟ್ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿದೆ.
ವಲಸೆ ಕಾರ್ಮಿಕರಿಗೆ ಉಚಿತವಾಗಿ ಪಡಿತರ ಒದಗಿಸಬೇಕೆಂದು ತಿಳಿಸಲಾಗಿದೆ. ಕೊರೊನಾ ಸಾಂಕ್ರಾಮಿಕ ರೋಗ ಕೊನೆಯಾಗುವವರೆಗೆ ಪಡಿತರವನ್ನು ಉಚಿತವಾಗಿ ರೇಷನ್ ನೀಡಬೇಕೆಂದು ಹೇಳಿದ್ದು, ವಲಸಿಗರಿಗೆ ಸಮುದಾಯ ಅಡಿಗೆಮನೆಗಳನ್ನು ಮುಂದುವರಿಸಲು ಕೇಂದ್ರಕ್ಕೆ ತಿಳಿಸಿದೆ.
ಸಾಂಕ್ರಾಮಿಕ ಪರಿಸ್ಥಿತಿ ಇರುವವರೆಗೂ ರಾಜ್ಯಗಳಿಗೆ ಆಹಾರ ಧಾನ್ಯಗಳನ್ನು ಹಂಚಿಕೆ ಮಾಡಿ ವಲಸಿಗ ಕಾರ್ಮಿಕರ ಉಚಿತವಾಗಿ ವಿತರಿಸಲು ಸುಪ್ರೀಂ ಕೋರ್ಟ್ ಸೂಚಿಸಿದೆ.
ಅಸಂಘಟಿತ ಮತ್ತು ವಲಸೆ ಕಾರ್ಮಿಕರನ್ನು ನೋಂದಾಯಿಸಲು ಪೋರ್ಟಲ್ ಪೂರ್ಣಗೊಳಿಸಲು ತಿಳಿಸಿದ್ದು, ರಾಷ್ಟ್ರೀಯ ಮಾಹಿತಿ ಕೇಂದ್ರ(ಎನ್ಐಸಿ)ದೊಂದಿಗೆ ಸಮಾಲೋಚಿಸಿ ಪೋರ್ಟಲ್ ಅಭಿವೃದ್ಧಿಪಡಿಸಲು ಉನ್ನತ ನ್ಯಾಯಾಲಯವು ಸೂಚಿಸಿದೆ.