ಕೇಸರಿ ಭಾರತದ ದುಬಾರಿ ಮಸಾಲೆ ಪದಾರ್ಥಗಳ ಸಾಲಿನಲ್ಲಿ ಸ್ಥಾನ ಪಡೆದಿದೆ ಎಂದು ಹೇಳಿದ್ರೆ ತಪ್ಪಾಗಲಿಕ್ಕಿಲ್ಲ. ಅನೇಕ ಖಾದ್ಯಗಳಲ್ಲಿ ಕೇಸರಿಯನ್ನ ಬಳಕೆ ಮಾಡ್ತಾರೆ. ಕೇಸರಿ ಖಾದ್ಯದಲ್ಲಿ ಮಾತ್ರವಲ್ಲದೇ ನಿಮ್ಮ ಮುಖದ ಮೇಲೂ ಜಾದೂ ಮಾಡುವ ಸಾಮರ್ಥ್ಯವನ್ನ ಹೊಂದಿದೆ.
ಕೇಸರಿಯಲ್ಲಿರುವ ಆಂಟಿ ಬ್ಯಾಕ್ಟೀರಿಯಾ ಅಂಶ ನಿಮ್ಮ ಮುಖದಲ್ಲಿ ಮೊಡವೆಯಿಂದ ಉಂಟಾದ ಕಲೆಯನ್ನ ಹೋಗಲಾಡಿಸಬಲ್ಲದು. ಇದಕ್ಕಾಗಿ ನೀವು 5 ತಾಜಾ ತುಳಸಿ ಎಲೆ ಹಾಗೂ 10 ಕೇಸರಿ ಎಳೆಗಳನ್ನ ನೀರಿನಲ್ಲಿ ನೆನೆಸಿಡಿ. ಇದಾದ ಬಳಿಕ ಇವುಗಳನ್ನ ಜಜ್ಜಿ ಪೇಸ್ಟ್ ಮಾಡಿಕೊಳ್ಳಿ. ಈ ಮಿಶ್ರಣವನ್ನ ಮುಖಕ್ಕೆ ಹಚ್ಚಿಕೊಂಡು ಕೆಲ ನಿಮಿಷದ ಬಳಿಕ ಸ್ವಚ್ಛ ನೀರಿನಲ್ಲಿ ತೊಳೆಯಿರಿ.
ಮುಖದಲ್ಲಿ ಉಂಟಾಗುವ ಸುಕ್ಕು ಕಲೆಗಳು ಸೌಂದರ್ಯವನ್ನೇ ಹಾಳುಗೆಡವಿಬಿಡುತ್ತದೆ. ಇದಾಕ್ಕಾಗಿ ನೀವು ನೆನೆಸಿದ ಕೇಸರಿ ಎಲೆಗಳ ಜೊತೆ 2 ಚಮಚ ಅರಿಶಿಣ ಸೇರಿಸಿ ಪೇಸ್ಟ್ ಮಾಡಿಕೊಳ್ಳಿ. ಇದನ್ನ ಮುಖಕ್ಕೆ ಹಚ್ಚಿಕೊಳ್ಳಿ. ನಿಮ್ಮ ಮುಖದಲ್ಲಿ ಸುಕ್ಕಿನ ಕಲೆ ನಿವಾರಣೆಯಾಗಲಿದೆ.
ತ್ವಚೆಯ ಕಾಂತಿಯನ್ನ ಹೆಚ್ಚಿಸಿಕೊಳ್ಳಬೇಕು ಅನ್ನೋ ಆಸೆ ಯಾವ ಮಹಿಳೆಯರಿಗೆ ಇರೋದಿಲ್ಲ ಹೇಳಿ. ಇದಕ್ಕಾಗಿ ನೀವು ಹಸಿ ಹಾಲಿನಲ್ಲಿ ಕೇಸರಿ ದಳಗಳನ್ನ ನೆನೆಸಿಡಿ. ಬಳಿಕ ಈ ಕೇಸರಿ ಹಾಲನ್ನ ಮುಖಕ್ಕೆ ಲೇಪಿಸಿಕೊಳ್ಳಿ. ಕೆಲವೇ ದಿನಗಳಲ್ಲಿ ನಿಮ್ಮ ಮುಖ ಹೊಳೆಯೋದನ್ನ ಗಮನಿಸಲಿದ್ದೀರಿ.