
ಕೊರೊನಾ ಮಧ್ಯೆ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಅನೇಕರು ಹೊಸ ಬ್ಯುಸಿನೆಸ್ ಶುರು ಮಾಡುವ ಪ್ಲಾನ್ ನಲ್ಲಿದ್ದಾರೆ. ಕಡಿಮೆ ಹೂಡಿಕೆ ಮಾಡಿ ಹೆಚ್ಚು ಲಾಭ ಗಳಿಸುವ ಬ್ಯುಸಿನೆಸ್ ಹುಡುಕುತ್ತಿದ್ದಾರೆ. ಇದ್ರಲ್ಲಿ ನೀವೂ ಒಬ್ಬರಾಗಿದ್ದರೆ, ಪ್ರತಿ ಮನೆಯಲ್ಲೂ ಬೇಡಿಕೆಯಿರುವ ಈ ಬ್ಯುಸಿನೆಸ್ ಶುರು ಮಾಡಿ. ಕಡಿಮೆ ಹೂಡಿಕೆ ಮಾಡಿ ಹೆಚ್ಚಿನ ಹಣ ಗಳಿಸಬಹುದು.
ಲೋಹದಿಂದ ತಯಾರಿಸಿದ ಕಟ್ಲರಿಗಳ ಉತ್ಪಾದನಾ ಘಟಕವನ್ನು ಪ್ರಾರಂಭಿಸಬಹುದು. ಸರ್ಕಾರದ ಮುದ್ರಾ ಯೋಜನೆಯಡಿ ಸಾಲವನ್ನು ಪಡೆಯಬಹುದು. ಕಟ್ಲರಿಗೆ ಎಲ್ಲಾ ಮನೆಗಳಲ್ಲಿ ಬೇಡಿಕೆಯಿದೆ.
ಈ ವ್ಯವಹಾರದ ಸೆಟಪ್ ಮಾಡಲು 1.8 ಲಕ್ಷ ರೂಪಾಯಿ ಬೇಕಾಗುತ್ತದೆ. ಇದರಲ್ಲಿ ವೆಲ್ಡಿಂಗ್ ಸೆಟ್, ಬಫಿಂಗ್ ಮೋಟರ್, ಡ್ರಿಲ್ಲಿಂಗ್ ಮೆಷಿನ್, ಬೆಂಚ್ ಗ್ರೈಂಡರ್, ಹ್ಯಾಂಡ್ ಡ್ರಿಲ್ಲಿಂಗ್, ಹ್ಯಾಂಡ್ ಗ್ರೈಂಡರ್, ಬೆಂಚ್, ಪ್ಯಾನಲ್ ಬೋರ್ಡ್ ಮತ್ತು ಇತರ ಸಾಧನಗಳೂ ಸೇರಿವೆ. ಇದಲ್ಲದೆ ಕಚ್ಚಾ ಸಾಮಗ್ರಿಗಳಿಗಾಗಿ ಸುಮಾರು 1,20,000 ರೂಪಾಯಿ ಬೇಕಾಗುತ್ತದೆ. ಸಿಬ್ಬಂದಿ ಸಂಬಳ ಸೇರಿ ಒಟ್ಟಾರೆಯಾಗಿ 3 ಅಥವಾ 3.3 ಲಕ್ಷ ಖರ್ಚು ಮಾಡಬೇಕಾಗುತ್ತದೆ. ನೀವು 1.14 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ರೆ ಸಾಕಾಗುತ್ತದೆ. ಉಳಿದ ಹಣವನ್ನು ಮುದ್ರಾ ಯೋಜನೆಯಲ್ಲಿ ಸಾಲ ಪಡೆಯಬಹುದು.
ಪ್ರಧಾನ್ ಮಂತ್ರಿ ಮುದ್ರ ಸಾಲ ಯೋಜನೆಯಡಿ ಈ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ಅಗತ್ಯವಿರುವ ಎಲ್ಲಾ ದಾಖಲೆಗಳೊಂದಿಗೆ ಒಂದು ಫಾರ್ಮ್ ಭರ್ತಿ ಮಾಡಬೇಕಾಗುತ್ತದೆ. ಹೆಸರು, ವಿಳಾಸ, ವ್ಯವಹಾರ ವಿಳಾಸ, ಶಿಕ್ಷಣ, ಪ್ರಸ್ತುತ ಆದಾಯ ಮತ್ತು ಎಷ್ಟು ಸಾಲದ ಅಗತ್ಯವಿದೆ ಎಲ್ಲ ಮಾಹಿತಿ ನೀಡಬೇಕಾಗುತ್ತದೆ.