ಬೆಳಗಾವಿ: ಬಟ್ಟೆ ತೊಳೆಯಲು ಹೋಗಿ ನಾಲ್ವರು ಸಹೋದರರು ಕೃಷ್ಣಾನದಿ ನೀರು ಪಾಲಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲುಕಿನ ಹಲ್ಯಾಳ ಗ್ರಾಮದಲ್ಲಿ ನಡೆದಿದೆ.
ಗೋಪಾಲ ಬನಸುಡೆ, ಸದಾಶಿವ ಬನಸುಡೆ, ಶಂಕರ ಬನಸುಡೆ ಹಾಗೂ ದೇರಪ್ಪ ಬನಸುಡೆ ನೀರು ಪಾಲಾದ ಸಹೋದರರು. ಬಟ್ಟೆ ತೊಳೆಯಲೆಂದು ನಾಲ್ವರು ಕೃಷ್ಣಾನದಿಗೆ ಹೋಗಿದ್ದರು. ಈ ವೇಳೆ ಸದಾಶಿವ ಎಂಬಾತ ಕಾಲು ಜಾರಿ ನೀರಿಗೆ ಬಿದ್ದಿದ್ದಾನೆ. ಆತನನ್ನು ರಕ್ಷಿಸಲೆಂದು ಹೋಗಿ ಉಳಿದ ಮುವರು ಸಹೋದರರು ಒಬ್ಬರಹಿಂದೊಬ್ಬರಂತೆ ನದಿ ನೀರು ಪಾಲಾಗಿದ್ದಾರೆ.
ನಾಚಿಕೆಗೇಡಿ ಕೆಲಸ ಮಾಡಿದ ಶ್ರೀಲಂಕಾ ಆಟಗಾರರ ವಿಡಿಯೋ ವೈರಲ್
ಸ್ಥಳಕ್ಕೆ ಅಥಣಿ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಭೇಟಿ ನೀಡಿದ್ದು, ನೀರುಪಾಲಾದವರಿಗಾಗಿ ಶೋಧ ನಡೆಸಿದ್ದಾರೆ.