ಗಡ್ಡಕ್ಕೂ-ಮದುವೆಗೂ ಏನು ಸಂಬಂಧ ಅಂತಾ ನೀವು ಕೇಳ್ಬಹುದು. ಸಂಬಂಧ ಇದೆ. ಉದ್ದವಾಗಿ ಬೆಳೆದ ಗಡ್ಡ ಮದುವೆಗೆ ಅಡ್ಡಿಯಾಗಿದೆ. ಇಬ್ಬರ ಸಂಬಂಧವನ್ನು ಹಾಳು ಮಾಡ್ತಿದೆ. ಯಸ್.ಲಂಡನ್ ನಲ್ಲಿ ಹುಡುಗ ಬಿಟ್ಟ ಗಡ್ಡ ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.
ಅಷ್ಟಕ್ಕೂ ಸಂಗಾತಿ ಗಡ್ಡದ ಬಗ್ಗೆ ಹುಡುಗಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾಳೆ. ಇಬ್ಬರು ಮೂರು ವರ್ಷದಿಂದ ಒಟ್ಟಿಗಿದ್ದಾರಂತೆ. ಲಾಕ್ ಡೌನ್ ಸಂದರ್ಭದಲ್ಲಿ ಹುಡುಗಿ ಪ್ರೇಮಿ ಗಡ್ಡ ಬಿಡಲು ಶುರು ಮಾಡಿದ್ದನಂತೆ. ಆ ಸಂದರ್ಭದಲ್ಲಿ ಹುಡುಗಿ ಏನೂ ಹೇಳಿಲ್ಲವಂತೆ. ಆದ್ರೀಗ ಗಡ್ಡ ತೆಗೆಯುವಂತೆ ಒತ್ತಾಯ ಮಾಡ್ತಿದ್ದಾಳೆ.
ಗಡ್ಡದ ಲುಕ್ ಹುಡುಗನಿಗೆ ಇಷ್ಟವಾಗಿದೆ. ಹಾಗಾಗಿ ಆತ ಏನೇ ಮಾಡಿದ್ರೂ ಶೇವ್ ಮಾಡಲಾರೆ ಎನ್ನುತ್ತಿದ್ದಾನೆ. ಶೇವ್ ಮಾಡಿದ್ರೆ ಮದುವೆ ಎಂದು ಹುಡುಗಿ ಹೇಳ್ತಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಷ್ಯ ಬರೆದ ಹುಡುಗಿ, ನನ್ನ ಪ್ರೇಮಿ ಮೇಲೆ ನನಗೆ ಹಕ್ಕಿದೆ ಎಂದು ಬರೆದುಕೊಂಡಿದ್ದಾಳೆ. ಮದುವೆ ದಿನ ಪತಿಯಾಗುವವನು ಸುಂದರವಾಗಿ ಕಾಣ್ಬೇಕು ಎಂಬುದು ಎಲ್ಲ ಹುಡುಗಿಯರ ಕನಸು ಎನ್ನುತ್ತಾಳೆ ಹುಡುಗಿ. ಇದು ಹುಡುಗನ ಕೋಪಕ್ಕೆ ಕಾರಣವಾಗಿದೆ. ಈ ಗಡ್ಡದ ವಿಷ್ಯ ಸಾಮಾಜಿಕ ಜಾಲತಾಣದಲ್ಲೀಗ ಚರ್ಚೆಯಾಗ್ತಿದೆ.