alex Certify ಮುಖ ನೋಡಿಯೇ ಪತ್ತೆ ಹಚ್ಚಲಾಗುತ್ತೆ ʼಕೊರೊನಾʼ ಸೋಂಕು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಖ ನೋಡಿಯೇ ಪತ್ತೆ ಹಚ್ಚಲಾಗುತ್ತೆ ʼಕೊರೊನಾʼ ಸೋಂಕು

ಅಬುದಾಬಿಯಲ್ಲಿ ಇಂದಿನಿಂದ ಮಾಲ್​ ಹಾಗೂ ವಿಮಾನ ನಿಲ್ದಾಣಗಳಲ್ಲಿ ಕೊರೊನಾ ಸೋಂಕನ್ನ ಪತ್ತೆ ಮಾಡಲು ಫೇಸ್​ ಸ್ಕ್ಯಾನರ್​ಗಳನ್ನ ಬಳಕೆ ಮಾಡಲು ಆರಂಭಿಸಲಾಗಿದೆ. 2000ಕ್ಕೂ ಅಧಿಕ ಮಂದಿ ಮೇಲೆ ನಡೆಸಲಾದ ಪ್ರಯೋಗದಲ್ಲಿ ಹೆಚ್ಚಿನ ಮಟ್ಟದ ಪರಿಣಾಮಕಾರತ್ವ ಕಂಡು ಬಂದಿದೆ.

ಈ ತಂತ್ರಜ್ಞಾನವು ವಿದ್ಯುತ್ಕಾಂತೀಯ ತರಂಗಗಳನ್ನ ಬಳಕೆ ಮಾಡಿ ಸೋಂಕನ್ನ ಪತ್ತೆ ಮಾಡುವ ಕಾರ್ಯ ಮಾಡುತ್ತದೆ. ಇದು ವೈರಸ್​​ನ ಆರ್​​ಎನ್​​ಎ ಕಣಗಳು ದೇಹದಲ್ಲಿ ಇದ್ದಾಗ ಇದು ಬದಲಾಗುತ್ತದೆ. ಇದರಿಂದ ಹೊರಬಂದ ಫಲಿತಾಂಶಗಳಲ್ಲಿ 93.5 ಪ್ರತಿಶತ ಸೂಕ್ಷ್ಮತೆ ತೋರಿಸಿದ್ದು ಸೋಂಕಿತರನ್ನ ಗುರುತಿಸುವಲ್ಲಿ ನಿಖರತೆ ಹೊಂದಿದೆ.

ಈ ವಿಶೇಷ ಸ್ಕ್ಯಾನರ್​ಗಳನ್ನ ಅಬುದಾಬಿಯ ಇಡಿಇ ಸಂಶೋಧನಾ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದೆ. ಅರಬ್​ ರಾಷ್ಟ್ರದ ರಾಜಧಾನಿಯಾಗಿರುವ ಅಬುದಾಬಿಯು ವಿಶ್ವದಲ್ಲೇ ಅತೀ ಹೆಚ್ಚು ಲಸಿಕೆ ಪೂರೈಕೆಯ ದತ್ತಾಂಶವನ್ನ ಹೊಂದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...