alex Certify ನಕಲಿ ನೋಟು ದಂಧೆ ಬೇಧಿಸಿದ ಪೊಲೀಸರು: ಆರೋಪಿಗಳಿಂದ ಬರೋಬ್ಬರಿ 5 ಕೋಟಿ ಮೌಲ್ಯದ ಫೇಕ್​ ಕರೆನ್ಸಿ ವಶಕ್ಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಕಲಿ ನೋಟು ದಂಧೆ ಬೇಧಿಸಿದ ಪೊಲೀಸರು: ಆರೋಪಿಗಳಿಂದ ಬರೋಬ್ಬರಿ 5 ಕೋಟಿ ಮೌಲ್ಯದ ಫೇಕ್​ ಕರೆನ್ಸಿ ವಶಕ್ಕೆ

ಬರೋಬ್ಬರಿ 5 ಕೋಟಿ ರೂಪಾಯಿ ಮೌಲ್ಯದ ನಕಲಿ ನೋಟುಗಳನ್ನ ವಶಪಡಿಸಿಕೊಳ್ಳುವಲ್ಲಿ ಮಧ್ಯ ಪ್ರದೇಶ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣ ಸಂಬಂಧ 8 ಮಂದಿಯನ್ನ ಪೊಲೀಸರು ಬಂಧಿಸಿದ್ದಾರೆ ಎಂದು ಹಿರಿಯ ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಕರಣ ಸಂಬಂಧ ಆರು ಮಂದಿಯನ್ನ ಮಧ್ಯ ಪ್ರದೇಶದ ಬಾಲಾಘಾಟ್​​ನಲ್ಲಿ ಬಂಧಿಸಲಾಗಿದ್ದರೆ, ಉಳಿದ ಇಬ್ಬರನ್ನ ಮಹಾರಾಷ್ಟ್ರದ ಗೋಂದಿಯಾ ಎಂಬಲ್ಲಿ ಸೆರೆಹಿಡಿಯಲಾಗಿದೆ ಎಂದು ಬಾಲಾಘಾಟ್​ ಹಿರಿಯ ಪೊಲೀಸ್​ ಅಧಿಕಾರಿ ಅಭಿಷೇಕ್​ ತಿವಾರಿ ಮಾಹಿತಿ ನೀಡಿದ್ರು.

10 ರೂಪಾಯಿಯಿಂದ 2000 ರೂಪಾಯಿ ಮುಖ ಬೆಲೆವರೆಗಿನ ನೋಟುಗಳನ್ನ ವಶಪಡಿಸಿಕೊಳ್ಳಲಾಗಿದೆ. ನಕಲಿ ನೋಟುಗಳ ಜಾಲದ ಸಂಬಂಧ ಸಿಕ್ಕ ಸೂಕ್ತ ಮಾಹಿತಿಯನ್ನ ಆಧರಿಸಿ ದಾಳಿ ನಡೆಸಲಾಗಿದೆ. ಬೈಹಾರ್​ ಹಾಗೂ ಬಾಲಾಘಾಟ್​ನಲ್ಲಿ ನಕಲಿ ನೋಟುಗಳ ಹಾವಳಿ ಮಿತಿಮೀರ್ತಿದೆ ಎಂದು ತಿವಾರಿ ಕಳವಳ ವ್ಯಕ್ತಪಡಿಸಿದ್ದಾರೆ.

ಎರಡು ದಿನಗಳ ಆಪರೇಷನ್​ನಲ್ಲಿ ಪೊಲೀಸರು 8 ಮಂದಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರಕರಣದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು ಹೆಚ್ಚಿನ ತನಿಖೆ ಮುಂದುವರಿದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...