ಆನ್‌ಲೈನ್‌ನಲ್ಲಿ ರೈಲ್ವೆ ಟಿಕೆಟ್ ಕಾಯ್ದಿರಿಸುವುದು ಇನ್ಮುಂದೆ ಸ್ವಲ್ಪ ಕಠಿಣವಾಗಲಿದೆ. ಐಆರ್‌ಸಿಟಿಸಿ ಪಾನ್, ಆಧಾರ್ ಅಥವಾ ಪಾಸ್‌ಪೋರ್ಟ್ ಮಾಹಿತಿಯನ್ನು ಕೇಳುವ ಸಾಧ್ಯತೆಯಿದೆ. ರೈಲ್ವೆ ಟಿಕೆಟ್ ದಲ್ಲಾಳಿಗಳನ್ನು ಟಿಕೆಟ್ ಬುಕಿಂಗ್ ವ್ಯವಸ್ಥೆಯಿಂದ ಹೊರಗಿಡಲು ಐಆರ್ಸಿಟಿಸಿ ಈ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
ಐಆರ್ಸಿಟಿಸಿ ಈ ಬಗ್ಗೆ ಕೆಲಸ ಮಾಡ್ತಿದೆ. ಇದಕ್ಕೆ ಆಧಾರ್-ಪಾನ್ ಲಿಂಕ್ ಅನಿವಾರ್ಯವಾಗಲಿದೆ. ಐಆರ್ಸಿಟಿಸಿ ವೆಬ್‌ಸೈಟ್ ಅಥವಾ ಆ್ಯಪ್ ಮೂಲಕ ರೈಲು ಟಿಕೆಟ್ ಕಾಯ್ದಿರಿಸಲು ಲಾಗಿನ್ ಮಾಡಿದ ತಕ್ಷಣ ಆಧಾರ್, ಪಾನ್ ಅಥವಾ ಪಾಸ್‌ಪೋರ್ಟ್ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ.
ಟಿಕೆಟ್‌ಗಾಗಿ ಲಾಗಿನ್ ಮಾಡುವ ವೇಳೆ ಪಾನ್, ಆಧಾರ್ ಅಥವಾ ಇತರ ಗುರುತಿನ ದಾಖಲೆಗಳೊಂದಿಗೆ ಲಿಂಕ್ ಮಾಡಿದಾಗ ಟಿಕೆಟ್ ಕಾಯ್ದಿರಿಸುವ ವಂಚನೆಯನ್ನು ನಿಲ್ಲಿಸಬಹುದು ಎಂದು ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ಮಹಾನಿರ್ದೇಶಕ ಅರುಣ್ ಕುಮಾರ್ ತಿಳಿಸಿದ್ದಾರೆ.
ಮೊದಲು ನೆಟ್‌ವರ್ಕ್ ರಚಿಸಬೇಕು. ಆಧಾರ್ ಪ್ರಾಧಿಕಾರದೊಂದಿಗಿನ ಕೆಲಸ ಬಹುತೇಕ ಮುಗಿದಿದೆ ಎಂದು ಅರುಣ್ ಕುಮಾರ್ ಹೇಳಿದ್ದಾರೆ. ರೈಲ್ ಸುರಕ್ಷಾ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಅಲ್ಲಿ ಈ ವಿಷಯಗಳಿಗೆ ಸಂಬಂಧಿಸಿದ ದೂರುಗಳನ್ನು ನೀಡಬಹುದು ಎಂದು ಅರುಣ್ ಕುಮಾರ್ ಹೇಳಿದ್ದಾರೆ.