alex Certify ಮೇಕಪ್‌ ನಂತರ ‘ಲಿಪ್​ಸ್ಟಿಕ್’​​ ಹೆಚ್ಚು ಸಮಯ ಇರಲು ಮಾಡಿ ಈ ಪ್ಲಾನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೇಕಪ್‌ ನಂತರ ‘ಲಿಪ್​ಸ್ಟಿಕ್’​​ ಹೆಚ್ಚು ಸಮಯ ಇರಲು ಮಾಡಿ ಈ ಪ್ಲಾನ್

ಲಿಪ್​ಸ್ಟಿಕ್​​ ಬಹುಕಾಲ ತುಟಿಯಲ್ಲಿ ಹಾಗೇ ಇರಬೇಕು ಅನ್ನೋ ಆಸೆ ಮಹಿಳೆಯರಿಗೆ ಇರುತ್ತೆ. ಆದರೆ ಆಹಾರ ಸೇವಿಸಿದಾಗ ಇಲ್ಲವೇ ಪಾನೀಯಗಳನ್ನ ಕುಡಿದಾಗ ಲಿಪ್​ಸ್ಟಿಕ್​​ ಹೋಗಿಬಿಡಬಹುದು. ಇದರಿಂದ ನಿಮ್ಮ ಮೇಕಪ್​​ ಒಂದು ರೀತಿ ಒಳ್ಳೆಯ ಕಳೆಯನ್ನ ಕಳೆದುಕೊಂಡು ಬಿಡುತ್ತೆ.

ಹಾಗಾದ್ರೆ ಲಿಪ್​ಸ್ಟಿಕ್​ ತುಟಿಯಲ್ಲಿ ಫ್ರೆಶ್​ ಆಗೇ ಇರಬೇಕು ಅಂದರೆ ಏನು ಮಾಡಬೇಕು..? ಅನ್ನೋ ಪ್ರಶ್ನೆ ನಿಮ್ಮ ತಲೆಯಲ್ಲಿ ಇರಬಹುದು. ಇದಕ್ಕೆ ಉತ್ತರ ಇಲ್ಲಿದೆ ನೋಡಿ.

ನಿಮ್ಮ ತುಟಿ ಮೃದುವಾಗಿ ಇದ್ದಷ್ಟು ಲಿಪ್​ಸ್ಟಿಕ್​ ನಿಮ್ಮ ತುಟಿಯಲ್ಲಿ ಬಾಳಿಕೆ ಬರಲಿದೆ. ಒಡಕು ತುಟಿ, ಒಣ ತುಟಿಗಳ ಮೇಲೆ ಲಿಪ್​ಸ್ಟಿಕ್​ ನಿಲ್ಲೋದಿಲ್ಲ. ಹೀಗಾಗಿ ಮೇಕಪ್​ ಮಾಡುವ ಮುನ್ನವೇ ತುಟಿಗೆ ನಿಮ್ಮಿಷ್ಟದ ಮಾಯಶ್ಚರೈಸರ್​ ಹಚ್ಚಿಕೊಳ್ಳಿ. ಇದಾದ ಬಳಿಕ ಲಿಪ್​ಸ್ಟಿಕ್​ ಹಚ್ಚಿದ್ರೆ ಒಳ್ಳೆಯದು.

ಟಿಶ್ಯೂ ಪೇಪರ್ ಕೂಡ ನಿಮ್ಮ ಈ ಸಮಸ್ಯೆಗೆ ಒಂದೊಳ್ಳೆ ಪರಿಹಾರ ನೀಡಬಲ್ಲದು. ಒಂದು ಲೇಯರ್​ ಲಿಪ್​ಸ್ಟಿಕ್​ ಹಚ್ಚಿದ ಬಳಿಕ ಟಿಶ್ಯು ಪೇಪರ್​ನ್ನು ನಿಮ್ಮ ತುಟಿಯ ಮಧ್ಯದಲ್ಲಿ ಇರಿಸಿ. ತುಟಿಗಳನ್ನ ಟಿಶ್ಯೂ ಪೇಪರ್​ಗೆ ತಾಕಿಸಿ. ಈ ರೀತಿ ಮಾಡೋದ್ರಿಂದ ಕೂಡ ಲಿಪ್​ ಸ್ಟಿಕ್​ ಲಾಂಗ್​ ಲಾಸ್ಟಿಂಗ್​ ಆಗಿರಲಿದೆ.

ಮಾರುಕಟ್ಟೆಗಳಲ್ಲಿ ಲಭ್ಯವಿರುವ ಲಿಪ್​ ಪ್ರೈಮರ್​ ಕೂಡ ಈ ಸಮಸ್ಯೆಗೆ ಬೆಸ್ಟ್​ ಪರಿಹಾರ. ಈ ಲಿಪ್​ ಪ್ರೈಮರ್​ಗಳು ಮಾಯ​ಶ್ಚುರೈಸರ್​ನಂತೆಯೇ ಕಾರ್ಯನಿರ್ವಹಿಸಲಿದೆ. ತುಟಿಯ ಮೃದು ಮಾಡೋದ್ರ ಜೊತೆಯಲ್ಲಿ ತುಟಿಗೆ ಹೊಳಪನ್ನೂ ನೀಡಲಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಒಳ್ಳೆಯ ಗುಣಮಟ್ಟದ ಲಿಪ್​ಸ್ಟಿಕ್​ಗಳನ್ನೇ ಬಳಕೆ ಮಾಡಿ. ತುಟಿ ತುಂಬಾನೇ ಸೂಕ್ಷ್ಮವಾದ ಭಾಗವಾದ್ದರಿಂದ ಲಿಪ್​ಸ್ಟಿಕ್​ ಖರೀದಿ ವೇಳೆ ಜಿಪುಣತನ ಬೇಡ. ಮಾರುಕಟ್ಟೆಯಲ್ಲಿ ಪ್ರಸಿದ್ಧಿ ಪಡೆದಿರುವ ಬ್ರ್ಯಾಂಡ್​ಗಳನ್ನೇ ಆದಷ್ಟು ಬಳಕೆ ಮಾಡಲು ಯತ್ನಿಸಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...