ಲವ್ಲಿ ಸ್ಟಾರ್ ಪ್ರೇಮ್ ನಟನೆಯ ಡಾ.ರಾಘವೇಂದ್ರ ನಿರ್ದೇಶನದ ‘ಪ್ರೇಮಂ ಪೂಜ್ಯಂ’ ಚಿತ್ರದ ‘ಅಮರ ಮಧುರ’ ಎಂಬ ಲಿರಿಕಲ್ ವಿಡಿಯೋವನ್ನು ಮೊನ್ನೆ ಕೆದಂಬಡಿ ಕ್ರಿಯೇಷನ್ಸ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಿದ್ದು ಸಾಕಷ್ಟು ವೀಕ್ಷಣೆಯನ್ನು ಪಡೆದುಕೊಂಡಿದೆ.
ಸುಂದರ ಹುಡುಗಿಯ ಮುಗ್ದ ನಗುವಿನ ಮತ್ತಷ್ಟು ವಿಡಿಯೋ ವೈರಲ್
ವಿಹಾನ್ ಆರ್ಯ ಮತ್ತು ಅನುರಾಧ ಭಟ್ ಈ ಹಾಡಿಗೆ ಧ್ವನಿಗೂಡಿಸಿದ್ದು ತುಂಬಾ ಸೊಗಸಾಗಿ ಮೂಡಿ ಬಂದಿದೆ. ಈಗಾಗಲೇ ಟೀಸರ್ ಮೂಲಕ ಸಾಕಷ್ಟು ಸದ್ದು ಮಾಡಿರುವ ಈ ಚಿತ್ರದಲ್ಲಿ ಐಂದ್ರಿತಾ ರೇ, ಬೃಂದಾ ಆಚಾರ್ಯ, ಮಾಸ್ಟರ್ ಆನಂದ್, ಸಾಧುಕೋಕಿಲ, ಅನುಪ್ರಭಾಕರ್ ಸೇರಿದಂತೆ ಮುಂತಾದ ತಾರಬಳಗವಿದೆ.