ತನ್ನ ಮಡದಿಗೆ ಚಿತ್ರಹಿಂಸೆ ಕೊಟ್ಟ ಆರೋಪ ಎದುರಿಸುತ್ತಿರುವ ಬಿಜೆಪಿ ಶಾಸಕ ವಿಶಾಲ್ ನೆಹ್ರಿಯಾ ತಲೆದಂಡಕ್ಕೆ ಆಗ್ರಹಿಸಿರುವ ಕಾಂಗ್ರೆಸ್ ಪ್ರಕರಣ ಸಂಬಂಧ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದೆ.
ಹಿಮಾಚಲ ಪ್ರದೇಶದ ಧರ್ಮಶಾಲಾ ಶಾಸಕ ನೆಹ್ರಿಯಾ ವಿರುದ್ಧ ಅವರ ಪತ್ನಿ ಒಶಿನ್ ಶರ್ಮಾ ದೂರು ದಾಖಲಿಸಿದ್ದು, ತಮ್ಮ ಪತಿಯಿಂದ ದೈಹಿಕ ಹಾಗೂ ಮಾನಸಿಕ ಚಿತ್ರಹಿಂಸೆ ಅನುಭವಿಸುತ್ತಿರುವುದಾಗಿ ಹೇಳಿದ್ದಾರೆ. ಈ ಬಗ್ಗೆ 11 ನಿಮಿಷಗಳ ವಿಡಿಯೋವನ್ನೂ ಒಶಿನ್ ಬಿಡುಗಡೆ ಮಾಡಿದ್ದು, ಅದೀಗ ವೈರಲ್ ಆಗಿದೆ. ನೆಹ್ರಿಯಾ ಹಾಗೂ ಒಶಿನ್ ಇದೇ ವರ್ಷದ ಏಪ್ರಿಲ್ 26ರಂದು ಮದುವೆ ಮಾಡಿಕೊಂಡಿದ್ದಾರೆ.
BIG NEWS: ಮಕ್ಕಳಿಗೆ ಶೀಘ್ರವೇ ಲಸಿಕೆ, 12 -18 ವರ್ಷದವರಿಗೆ ವ್ಯಾಕ್ಸಿನ್
ಈ ಬಗ್ಗೆ ಮಾತನಾಡಿದ ರಾಜ್ಯ ಬಿಜೆಪಿ ವಕ್ತಾರ ರಣಧೀರ್ ಶರ್ಮಾ, “ಈ ವಿಷಯದ ವಿಡಿಯೋ ವೈರಲ್ ಆಗಿದೆ. ಲಿಖಿತ ದೂರೊಂದನ್ನು ಪೊಲೀಸರಿಗೆ ಸಲ್ಲಿಸಲಾಗಿದೆ. ದೂರನ್ನು ಅನ್ವಯಿಸಿ ಪೊಲೀಸರು ಕ್ರಮ ತೆಗೆದುಕೊಳ್ಳಲಿದ್ದಾರೆ. ಈ ವಿಚಾರವಾಗಿ ಸರ್ಕಾರ ಯಾವುದೇ ಒತ್ತಡ ಹಾಕಲು ಬರುವುದಿಲ್ಲ” ಎಂದಿದ್ದಾರೆ.