alex Certify ಆಹಾರ ಪದಾರ್ಥಗಳ ಬೆಲೆ ಏರಿಕೆಗೆ ಐಎಂಎಫ್ ಕಳವಳ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಹಾರ ಪದಾರ್ಥಗಳ ಬೆಲೆ ಏರಿಕೆಗೆ ಐಎಂಎಫ್ ಕಳವಳ

ಜಗತ್ತಿನೆಲ್ಲೆಡೆ ಆಹಾರ ಪದಾರ್ಥಗಳ ಬೆಲೆಗಳು ಕೈಗೆಟುಕದ ಮಟ್ಟಕ್ಕೆ ಹೋಗುತ್ತಿರುವುದು ನಿಜಕ್ಕೂ ಕಳವಳದ ವಿಷಯವಾಗಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ತಿಳಿಸಿದೆ.

ಕೋವಿಡ್-19 ಸಾಂಕ್ರಮಿಕದ ಕಾರಣದಿಂದ ಪೂರೈಕೆ ಕೊಂಡಿಯಲ್ಲಿ ವ್ಯತ್ಯಯವಾಗಿ, ಸಾರಿಗೆ ವೆಚ್ಚಗಳಲ್ಲಿ ಏರಿಕೆ ಕಂಡುಬಂದ ಕಾರಣ 2020ಕ್ಕೆ ಹೋಲಿಕೆ ಮಾಡಿದಲ್ಲಿ 2021ರಲ್ಲಿ ಆಹಾರ ಪದಾರ್ಥಗಳ ಬೆಲೆಗಳು 25%ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಐಎಂಎಫ್ ಇದೇ ವೇಳೆ ತಿಳಿಸಿದ್ದು, ಈ ಹಣದುಬ್ಬರವು ವರ್ಷಾಂತ್ಯದ ವೇಳೆಗೆ ಸಹಜ ಸ್ಥಿತಿಯತ್ತ ಬರಲಿದೆ ಎಂದಿದೆ.

ಇತ್ತೀಚಿನ ದಿನಗಳಲ್ಲಿ ಆಹಾರ ಪದಾರ್ಥಗಳ ಬೆಲೆಗಳಲ್ಲಿ ಹರಿತವಾದ ಏರಿಕೆ ಕಂಡುಬಂದಿದ್ದು, ಇದರಿಂದಾಗಿ ದೇಶೀ ಮಾರುಕಟ್ಟೆಗಳಲ್ಲೂ ಸಹ ಬೆಲೆಗಳು ಏರಿಕೆಯಾಗಿ ಸಗಟು ಹಾಗೂ ಚಿಲ್ಲರೆ ವ್ಯಾಪಾರಿಗಳು ಈ ಹೆಚ್ಚಳವನ್ನು ಗ್ರಾಹಕರಿಗೆ ವರ್ಗಾಯಿಸುತ್ತಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...