ಕಳೆದ 41 ವರ್ಷಗಳಿಂದ ತಂದೆ ಹಾಗೂ ಸಹೋದರನ ಜೊತೆಗೆ ಅರಣ್ಯದಲ್ಲಿ ವಾಸಿಸುತ್ತಿರುವ ವಿಯೆಟ್ನಾಂನ ಈ ವ್ಯಕ್ತಿಗೆ ಹೆಣ್ಣು ಜೀವಿಗಳು ಭೂಮಿ ಮೇಲೆ ಇವೆ ಎಂಬ ಐಡಿಯಾನೇ ಇಲ್ಲ…! ಈತನನ್ನು ’ರಿಯಲ್ ಟಾರ್ಜನ್’ ಎಂದು ಕರೆಯಲಾಗಿದೆ.
1972ರಲ್ಲಿ ವಿಯೆಟ್ನಾಂ ಯುದ್ಧದ ವೇಳೆ ಅಮೆರಿಕದ ಬಾಂಬಿಂಗ್ನಲ್ಲಿ ತನ್ನ ತಾಯಿ ಹಾಗೂ ಒಡಹುಟ್ಟಿದವರನ್ನು ಕಳೆದುಕೊಂಡ ಹೋ ವಾನ್ ಲಾಂಗ್ ಕಾಡಿಗೆ ಓಡಿಹೋಗಿದ್ದರು. ಇಲ್ಲಿನ ಕಾಂಗ್ ಗಾಯ್ ಪ್ರಾಂತ್ಯದ ಟೇ ಟ್ರಾ ಜಿಲ್ಲೆಯ ದಟ್ಟಡವಿಯಲ್ಲಿ ಲಾಂಗ್ ಬಚ್ಚಿಟ್ಟುಕೊಂಡಿದ್ದರು.
2015ರಲ್ಲಿ ಛಾಯಾಗ್ರಾಹಕ ಅಲ್ವಾರೋ ಸೆರೆಜ಼ೋ ಈ ಕುಟುಂಬದ ಗುರುತು ಹಿಡಿಯುವವರೆಗೂ ಈ ಮೂವರೂ ಕಾಡಿನಲ್ಲಿ ಜೇನುತುಪ್ಪ, ಹಣ್ಣುಗಳು ಹಾಗೂ ವನ್ಯಜೀವಿಗಳನ್ನು ತಿಂದುಕೊಂಡು ಬದುಕಿದ್ದರು. ಮರಮುಟ್ಟು ಬಳಸಿಕೊಂಡು ಸೂರೊಂದನ್ನು ಕಟ್ಟಿಕೊಂಡಿದ್ದ ಇವರು ತಮ್ಮನ್ನು ರಕ್ಷಿಸಿಕೊಂಡಿದ್ದರು.
ಗರ್ಭಿಣಿಯರಿಗೆ ಕೊರೊನಾ ಲಸಿಕೆ ನೀಡುವ ಕುರಿತಂತೆ ಆರೋಗ್ಯ ಸಚಿವಾಲಯದಿಂದ ಮಹತ್ವದ ಮಾಹಿತಿ
“ದೂರದಿಂದಲೇ ಜನರನ್ನು ಕಂಡೊಡನೆಯೇ ಓಡಿ ಹೋಗುತ್ತಿದ್ದ ಇವರೆಲ್ಲಾ, ಇಲ್ಲಿವರೆಗೂ ಗಂಡು & ಹೆಣ್ಣಿನ ನಡುವಿನ ಅಂತರವನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ. ಲಾಂಗ್ಗೆ ಸ್ವಲ್ಪವೂ ಲೈಂಗಿಕ ಆಸಕ್ತಿ ಬೆಳೆದಿಲ್ಲ ಹಾಗೂ ಆತನ ಸಂತಾನೋತ್ಪತ್ತಿಯ ಕಾತರತೆ ಇದುವರೆಗೂ ಎಂದಿಗೂ ಹೊರಬಂದಿಲ್ಲ ಎಂದು ನಾನು ಖಾತ್ರಿಯಾಗಿ ಹೇಳಬಲ್ಲೆ” ಎಂದು ಸೆರೆಜ಼ೋ ಹೇಳುತ್ತಾರೆ.
ಪ್ರಾಣಿಗಳನ್ನು ಜನಸ್ನೇಹಿ ಜೀವಿಗಳನ್ನಾಗಿ ಕಾಣುವ ಲಾಂಗ್ಗೆ ಆಧುನಿಕ ಜಗತ್ತು ಗೊಂದಲಮಯ ಹಾಗೂ ಶಬ್ದಮಯವಾಗಿ ಕಾಣುತ್ತಿದೆ.