ಮನೆಯಿಂದ ಕೆಲಸ ಮಾಡುವ ವೇಳೆ 8 ಗಂಟೆಗಳಲ್ಲಿ ಮಾಡಬೇಕಾದ ಕೆಲಸವನ್ನು ಎರಡೇ ಗಂಟೆಗಳಲ್ಲಿ ಮುಗಿಸಿ ಜಾಲಿ ಮಾಡುವ ಬಗೆಯನ್ನು ಕಂಡುಕೊಂಡಿದ್ದ ವ್ಯಕ್ತಿಯೊಬ್ಬ ತನ್ನ ಪ್ಲಾನ್ ಅನ್ನು ರೆಡ್ಡಿಟ್ನಲ್ಲಿ ಹಂಚಿಕೊಂಡಿದ್ದಾನೆ.
ಕೆಲಸದಲ್ಲಿ ಯಾವಾಗಲೂ ಹೆಚ್ಚಿನ ಕ್ಷಮತೆ ಹೊಂದಿದ್ದ ತಾನು ಸದಾ ತನ್ನ ಸಹೋದ್ಯೋಗಿಗಳಿಗಿಂತಲೂ ವೇಗವಾಗಿ ಕೆಲಸ ಮಾಡುತ್ತಿದ್ದದ್ದಾಗಿ ಹೇಳಿರುವ ಈತ, ಪ್ರತಿನಿತ್ಯದ ಕಚೇರಿ ಕೆಲಸದಲ್ಲಿ 5 ಗಂಟೆಗಳನ್ನು ಉಳಿಸಿ ತನಗೆ ಬೇಕಾದ ಕೆಲಸ ಮಾಡುತ್ತಿದ್ದದ್ದಾಗಿ ಹೇಳಿಕೊಂಡಿದ್ದಾನೆ.
ಮೇನಕಾ ಗಾಂಧಿ ನಮ್ಮ ಪಕ್ಷದವರು ಎಂದು ಹೇಳಲು ಮುಜುಗರವಾಗುತ್ತೆ ಎಂದ ಬಿಜೆಪಿ ಮಾಜಿ ಸಚಿವ…!
“ದೊಡ್ಡ ಡೇಟಾಬೇಸ್ ರಚಿಸಿದ ನಾನು ಅದನ್ನು ಮೈಕ್ರೋಸಾಫ್ಟ್ ಎಕ್ಸೆಲ್ಗೆ ಲಿಂಕ್ ಮಾಡಿ, ಎಲ್ಲವನ್ನೂ ಎಕ್ಸೆಲ್ ಲೆಕ್ಕಾಚಾರ ಮಾಡುವಂತೆ ಮಾಡಿದ್ದೆ. ವಾಕ್ಯ ರಚನೆಗಳನ್ನೂ ಸಹ ಆಟೋಮೇಟ್ ಮಾಡಿ ಆಮೇಲೆ ಮೈಕ್ರೋಸಾಫ್ಟ್ ವರ್ಡ್ಗೆ ಎಲ್ಲವನ್ನೂ ಎಕ್ಸ್ಪೋರ್ಟ್ ಮಾಡಿಕೊಳ್ಳುತ್ತಿದ್ದೆ” ಎಂದ ಈತ ತನ್ನ ಕೆಲಸದ ಈ ಪರಿಯನ್ನು ಗರ್ಲ್ಫ್ರೆಂಡ್ಗೆ ತೋರಿದ್ದೇ ಎಡವಟ್ಟಾಗಿಬಿಟ್ಟಿದೆ.
“ಕೆಲ ಕಾಲದ ಬಳಿಕ ಆಕೆಯೊಂದಿಗೆ ಬ್ರೇಕಪ್ ಆಗಿಬಿಟ್ಟಿದೆ. ನಮ್ಮ ಸಂಬಂಧ ಮೊದಲಿನಂತೆ ಇರದೇ ಇದ್ದ ಕಾರಣ ಆಕೆಯೊಂದಿಗೆ ಬ್ರೇಕಪ್ ಆಗುವುದೇ ಸರಿ ಎಂದು ನಿರ್ಧರಿಸಿದೆ. ಬ್ರೇಕಪ್ ಆದ ಮೊದಲಿಗೆ ಎಲ್ಲವೂ ಶಾಂತಿಯುತವಾಗಿಯೇ ಇತ್ತು”
“ಎರಡು ದಿನಗಳ ಬಳಿಕ ಎಚ್ಆರ್ನಿಂದ ನನಗೆ ಕರೆ ಬಂದಿದ್ದು, ಕೆಲಸದ ಸಂಬಂಧ ಶಿಸ್ತಿನ ಕ್ರಮ ಅದಾಗಿತ್ತು. ನನ್ನ ದುರದೃಷ್ಟಕ್ಕೆ ನನ್ನ ಹಿಂದಿನ ದಿನಗಳ ಚಟುವಟಿಕೆಗಳ ಸ್ಕ್ರೀನ್ಶಾಟ್ಗಳನ್ನು ನನಗೆ ತೋರಲಾಯಿತು; ಮೀಮ್ಗಳು, ವಹಿವಾಟಿನ ಚಟುವಟಿಕೆಗಳು, ಸುದ್ದಿ ಓದಿದ್ದು, ಯೂಟ್ಯೂಬ್ ಹಾಗೂ ನಾನು ಪ್ರತಿನಿತ್ಯ ಎಷ್ಟು ಗಂಟೆಗಳ ಕಾಲ ಕೆಲಸ ಮಾಡಿದೆ ಹಾಗೂ ವ್ಯರ್ಥ ಮಾಡಿದೆ ಎಂಬ ಟ್ಯಾಲಿಯನ್ನೂ ಸಹ ತೋರಲಾಯಿತು” ಎಂದು ಈತ ಹೇಳಿಕೊಂಡಿದ್ದಾನೆ.
ಪ್ರೀತಿಸಿ ಮದುವೆಯಾದ ಜೋಡಿ ಬಾಳಿಗೆ ಕೊಳ್ಳಿಯಿಟ್ಟ ಪೋಷಕರು
“ವಾಕ್ ಮಾಡಿ ಬರಲೆಂದು ಆಚೆ ಹೋದ ಘಳಿಗೆ ನನ್ನ ಮಾಜಿ ಪ್ರಿಯತಮೆ ನನ್ನ ಸ್ಕ್ರೀನ್ ಅನ್ನು ಮೈಕ್ರೋಸಾಫ್ಟ್ ಸ್ಕೈಪ್ ಮೂಲಕ ಶೇರ್ ಮಾಡಿ, ಪ್ರತಿನಿತ್ಯದ ನನ್ನ ಕೆಲಸಗಳನ್ನು ರೆಕಾರ್ಡ್ ಮಾಡಿಕೊಂಡು ಎಚ್ಆರ್ಗೆ ನನ್ನ ಬಗ್ಗೆ ರಿಪೋರ್ಟ್ ಮಾಡಿದ್ದಾಳೆ. ನಾನು ನನ್ನ ಕೆಲಸವನ್ನು ಮಾಡಿಕೊಂಡು ಹೋಗಬೇಕಿತ್ತು. ನನ್ನ ಗರ್ಲ್ಫ್ರೆಂಡ್ ಅನ್ನು ಇಂಪ್ರೆಸ್ ಮಾಡುವ ಬದಲಿಗೆ ನನ್ನ ಸ್ಕ್ರೀನ್ ಅನ್ನು ಶೇರ್ ಮಾಡಲಾಗಿದೆ ಎಂದು ಗಮನಿಸಬೇಕಿತ್ತು” ಎಂದು ಈತ ಹೇಳಿಕೊಂಡಿದ್ದಾನೆ.