alex Certify ಪ್ರೀತಿಸಿ ಮದುವೆಯಾದ ಜೋಡಿ ಬಾಳಿಗೆ ಕೊಳ್ಳಿಯಿಟ್ಟ ಪೋಷಕರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರೀತಿಸಿ ಮದುವೆಯಾದ ಜೋಡಿ ಬಾಳಿಗೆ ಕೊಳ್ಳಿಯಿಟ್ಟ ಪೋಷಕರು

ಕಳೆದ ವರ್ಷ ಆಗಸ್ಟ್​ ತಿಂಗಳಲ್ಲಿ ಪೋಷಕರ ವಿರೋಧ ಕಟ್ಟಿಕೊಂಡು ಮದುವೆಯಾಗಿದ್ದ ನವಜೋಡಿ ರಕ್ಷಣೆಗಾಗಿ ಪಂಜಾಬ್​ ಹಾಗೂ ಹರಿಯಾಣ ಹೈಕೋರ್ಟ್ ಮೆಟ್ಟಿಲೇರಿತ್ತು. ಆದರೆ ಈ ದಂಪತಿಯ ಮೇಲೆ ಗುರುವಾರ ರಾತ್ರಿ ದೆಹಲಿಯ ದ್ವಾರಕಾ ಪ್ರದೇಶದಲ್ಲಿ ಗುಂಡು ಹಾರಿಸಲಾಗಿದೆ.

ತಂಗಿಯನ್ನು ಚುಡಾಯಿಸಿದವನಿಗೆ ಬುದ್ದಿ ಕಲಿಸಲು ಹೋದವನು ಮಾಡಿದ್ದೇನು ಗೊತ್ತಾ….?

ದ್ವಾರಕಾದ ಅಂಬ್ರಾಹಿ ಗ್ರಾಮದಲ್ಲಿ ನೆಲೆಸಿದ್ದ ದಂಪತಿಯ ಮನೆಗೆ ನುಗ್ಗಿದ 7 ಮಂದಿ ದುಷ್ಕರ್ಮಿಗಳು 10 ಬಾರಿ ಫೈರಿಂಗ್​ ನಡೆಸಿದ್ದಾರೆ. ಈ ದುರ್ಘಟನೆಯಲ್ಲಿ 24 ವರ್ಷದ ವಿನಯ್​​ ದಹಿಯಾ ಸಾವನ್ನಪ್ಪಿದ್ದರೆ 19 ವರ್ಷದ ಕಿರಣ್​ ಗಂಭೀರವಾಗಿ ಗಾಯಗೊಂಡಿದ್ದಾಳೆ. ಮೃತ ವಿನಯ್​​ ಟ್ಯಾಕ್ಸಿ ಡ್ರೈವರ್​ ಆಗಿ ಕೆಲಸ ಮಾಡುತ್ತಾ ಸಂಸಾರ ನಡೆಸುತ್ತಿದ್ದ ಎನ್ನಲಾಗಿದೆ.

ಕಪ್ಪು ವರ್ಣೀಯನ ಹತ್ಯೆ ಮಾಡಿದ್ದ ಪೊಲೀಸ್‌ ಅಧಿಕಾರಿಗೆ 22.5 ವರ್ಷಗಳ ಕಾಲ ಜೈಲು..!

ಕಳೆದ ವರ್ಷ ಆಗಸ್ಟ್​ 13ರಂದು ಈ ದಂಪತಿ ಕುಟುಂಬಸ್ಥರ ವಿರೋಧ ಕಟ್ಟಿಕೊಂಡು ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು. ಅಲ್ಲದೇ ರಕ್ಷಣೆ ಕೋರಿ ಕೋರ್ಟ್ ಮೆಟ್ಟಿಲೇರಿದ್ದರು.

ಈ ದುರ್ಘಟನೆ ಬಳಿಕ ಪೊಲೀಸರು ಕಿರಣ್​ ಕುಟುಂಬಸ್ಥರನ್ನ ವಿಚಾರಣೆಗೆ ಕರೆಸಿದ್ದಾರೆ. ಈ ಸಂಬಂಧ ಮಾತನಾಡಿದ ದಂಪತಿ ಪರ ವಕೀಲ ಅಭಿಮನ್ಯು ಕಲ್ಸೈ, ಅವರಿಬ್ಬರು ನನ್ನ ಬಳಿ ಬಂದಿದ್ದರು. ಕಿರಣ್​ ಕುಟುಂಬಸ್ಥರಿಗೆ ಈ ಮದುವೆ ಸುತಾರಾಂ ಇಷ್ಟವಿರಲಿಲ್ಲ. ಹೀಗಾಗಿ ನಮಗೆ ಪದೇ ಪದೇ ಕೊಲೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಹೇಳಿಕೊಂಡಿದ್ದರು ಎಂದು ಹೇಳಿದ್ದಾರೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...