alex Certify ಸ್ಮಾರ್ಟ್​ ನಗರಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ಸೂರತ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಮಾರ್ಟ್​ ನಗರಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ಸೂರತ್

ಇಂದೋರ್​ ಹಾಗೂ ಸೂರತ್​ ನಗರಗಳನ್ನ ಕೇಂದ್ರ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯ 2020ರ ಸ್ಮಾರ್ಟ್​ ಸಿಟಿ ಮಿಷನ್​ ಸ್ಪರ್ಧೆಯ ವಿಜೇತ ನಗರಗಳು ಎಂದು ಘೋಷಣೆ ಮಾಡಿದೆ.

ಸ್ಮಾರ್ಟ್​ ಸಿಟಿ ಸ್ಪರ್ಧೆಯ ಆರನೆ ವಾರ್ಷಿಕೋತ್ಸವದ ಅಂಗವಾಗಿ ನಡೆಸಲಾದ ಆನ್​​ಲೈನ್​ ಕಾರ್ಯಕ್ರಮದಲ್ಲಿ ವಿಜೇತರ ಪಟ್ಟಿಯನ್ನ ಘೋಷಣೆ ಮಾಡಲಾಗಿದೆ. ಉತ್ತರ ಪ್ರದೇಶ ರಾಜ್ಯ ಅಗ್ರಗಣ್ಯ ಸ್ಥಾನದಲ್ಲಿದ್ದರೆ ನಂತರದ ಸ್ಥಾನಗಳನ್ನ ಮಧ್ಯಪ್ರದೇಶ ಹಾಗೂ ತಮಿಳುನಾಡು ಪಡೆದುಕೊಂಡಿದೆ.

ತೆರಿಗೆ ವಿನಾಯಿತಿ ಬಗ್ಗೆ ಕೇಂದ್ರದಿಂದ ಮಹತ್ವದ ಕ್ರಮ: ಕೊರೊನಾ ಚಿಕಿತ್ಸೆ ವೆಚ್ಚ, ಪರಿಹಾರಕ್ಕೆ ಇಲ್ಲ ತೆರಿಗೆ

ನಾಲ್ಕು ಹಾಗೂ ಐದನೇ ಸ್ಥಾನದಲ್ಲಿ ಚಂಡೀಗಢ ಹಾಗೂ ಉತ್ತರಾಖಂಡ್​ ರಾಜ್ಯಗಳ ಹೆಸರನ್ನ ಘೋಷಣೆ ಮಾಡಲಾಗಿದೆ. 2019ನೇ ಸಾಲಿನಲ್ಲಿ ಕೇವಲ ಸೂರತ್​​ ಮಾತ್ರ ಸ್ಮಾರ್ಟ್​ ಸಿಟಿ ನಗರದ ಪ್ರಶಸ್ತಿಯನ್ನ ಬಾಚಿಕೊಂಡಿತ್ತು.

ಇದೇ ಮೊದಲ ಬಾರಿಗೆ ಸ್ಮಾರ್ಟ್​ ಸಿಟಿ ನಗರಗಳ ಆಯ್ಕೆಯನ್ನ ಪರಿಗಣಿಸಿ ರಾಜ್ಯಗಳಿಗೂ ಪ್ರಶಸ್ತಿ ನೀಡಲಾಗಿದೆ. ಸ್ಮಾರ್ಟ್​ ಸಿಟಿ ಲೀಡರ್​ಶಿಪ್​ ವಿಭಾಗದಲ್ಲಿ ಅಹಮದಾಬಾದ್ ಪ್ರಥಮ, ವಾರಣಾಸಿ ದ್ವಿತೀಯ ಹಾಗೂ ರಾಂಚಿ ಮೂರನೇ ಸ್ಥಾನವನ್ನ ಪಡೆದುಕೊಂಡಿದೆ. ಸೂರತ್​, ಇಂದೋರ್​, ಅಹಮದಾಬಾದ್​, ಪುಣೆ, ವಿಜಯವಾಡ, ರಾಜಕೋಟ್, ವಡೋದರಾ, ವಿಶಾಖಪಟ್ಟಣಂ, ಪಿಂಪ್ರಿ- ಚಿಂಚ್ವಾಡ ಹವಾಮಾನ ಸ್ಮಾರ್ಟ್ ನಗರಗಳ ಮೌಲ್ಯಮಾಪನ ಚೌಕಟ್ಟಿನಲ್ಲಿ 4 ಸ್ಟಾರ್​ ರೇಟಿಂಗ್​ ಪಡೆದುಕೊಂಡಿದೆ. ಈ ಪ್ರಶಸ್ತಿಗಳನ್ನ ಕೇಂದ್ರ ಸಚಿವ ಹರದೀಪ್​ ಸಿಂಗ್​ ಹಾಗೂ ಸಚಿವಾಲಯದ ಕಾರ್ಯದರ್ಶಿ ದುರ್ಗಾ ಶಂಕರ್ ಮಿಶ್ರಾ ಘೋಷಣೆ ಮಾಡಿದ್ರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...