ಗರ್ಭಿಣಿಯರೂ ಸಹ ಕೋವಿಡ್ 19 ವಿರುದ್ಧ ಲಸಿಕೆಯನ್ನ ಪಡೆಯಬಹುದಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಹತ್ವದ ಮಾಹಿತಿ ನೀಡಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಪರವಾಗಿ ಸುದ್ದಿಗೋಷ್ಠಿ ನಡೆಸಿದ ಮಾತನಾಡಿಸ ಐಸಿಎಂಆರ್ ಮಹಾನಿರ್ದೇಶಕ ಡಾ. ಬಲರಾಮ್ ಭಾರ್ಗವ, ಕೇಂದ್ರ ಆರೋಗ್ಯ ಸಚಿವಾಲಯ ಲಸಿಕೆ ಕುರಿತಾಗಿ ಕೆಲ ಮಾರ್ಗಸೂಚಿಗಳನ್ನ ಹೊರಡಿಸಿದ್ದು ಇದರಲ್ಲಿ ಗರ್ಭಿಣಿಯರಿಗೆ ಲಸಿಕೆ ನೀಡಬಹುದು ಎಂದು ಹೇಳಿದೆ. ಕೊರೊನಾ ಲಸಿಕೆಯು ಗರ್ಭಿಣಿಯರಿಗೆ ಉಪಯುಕ್ತವಾಗಿದೆ ಎಂದು ಭಾರ್ಗವ ಹೇಳಿದ್ರು.
BIG BREAKING: ಕಪ್ಪು ವರ್ಣೀಯನ ಹತ್ಯೆ ಮಾಡಿದ್ದ ಪೊಲೀಸ್ ಅಧಿಕಾರಿಗೆ 22.5 ವರ್ಷಗಳ ಕಾಲ ಜೈಲು..!
ಮಕ್ಕಳಿಗೆ ಕೊರೊನಾ ಲಸಿಕೆ ನೀಡಬೇಕೋ ಬೇಡ್ವೋ ಎಂಬ ವಿಚಾರದ ಬಗ್ಗೆ ಇನ್ನೂ ಚರ್ಚೆಗಳು ಮುಂದುವರಿದಿದೆ ಎಂದು ಡಾ. ಭಾರ್ಗವ ಹೇಳಿದ್ದಾರೆ.
ಸಹಕಾರ ಬ್ಯಾಂಕ್ ನಿರ್ದೇಶಕ ಹುದ್ದೇಗೇರುವವರಿಗೆ RBI ಶಾಕ್: ಶಾಸಕರು ಸೇರಿ ಜನಪ್ರತಿನಿಧಿಗಳಿಗೆ ನಿಷೇಧ – ಶೈಕ್ಷಣಿಕ ಅರ್ಹತೆ ನಿಗದಿ
ಪ್ರಸ್ತುತ ಒಂದು ದೇಶ ಮಾತ್ರ ಮಕ್ಕಳಿಗೆ ಕೊರೊನಾ ಲಸಿಕೆಯನ್ನ ನೀಡುತ್ತಿದೆ. ಆದರೆ ಪುಟ್ಟ ಮಕ್ಕಳಿಗೆ ಲಸಿಕೆ ಬೇಕಾಗುತ್ತದೆಯೇ ಎಂಬುದು ಇಂದಿಗೂ ಒಂದು ಪ್ರಶ್ನೆಯಾಗಿಯೇ ಉಳಿದಿದೆ. ಹೀಗಾಗಿ ಮಕ್ಕಳಿಗೆ ಲಸಿಕೆ ನೀಡುವುದರ ಬಗ್ಗೆ ಮಾಹಿತಿಯನ್ನ ಕಲೆ ಹಾಕುತ್ತಿದ್ದೇವೆ. 2 ರಿಂದ 18 ವರ್ಷದೊಳಗಿನವರ ಬಗ್ಗೆ ಅಧ್ಯಯನ ನಡೆಯುತ್ತಿದೆ. ಈ ಅಧ್ಯಯನವನ್ನ ಆಧರಿಸಿ ಸೆಪ್ಟೆಂಬರ್ ತಿಂಗಳೊಳಗಾಗಿ ಸೂಕ್ತ ನಿರ್ಧಾರ ಪ್ರಕಟಿಸುತ್ತೇವೆ ಎಂದು ಅವರು ಹೇಳಿದ್ದಾರೆ.