alex Certify BIG BREAKING: ಕಪ್ಪು ವರ್ಣೀಯನ ಹತ್ಯೆ ಮಾಡಿದ್ದ ಪೊಲೀಸ್‌ ಅಧಿಕಾರಿಗೆ 22.5 ವರ್ಷಗಳ ಕಾಲ ಜೈಲು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಕಪ್ಪು ವರ್ಣೀಯನ ಹತ್ಯೆ ಮಾಡಿದ್ದ ಪೊಲೀಸ್‌ ಅಧಿಕಾರಿಗೆ 22.5 ವರ್ಷಗಳ ಕಾಲ ಜೈಲು..!

ಜಾರ್ಜ್​ ಫ್ಲೋಯ್ಡ್​​ ಕೊಲೆ ಪ್ರಕರಣದ ಆರೋಪಿ ಮಿನ್ನೆಪೊಲಿಸ್​​ನ ಮಾಜಿ ಪೊಲೀಸ್​ ಅಧಿಕಾರಿ ಡೆರೆಕ್​ ಚೌವಿನ್​ಗೆ ಕೋರ್ಟ್​ 22.5 ವರ್ಷಗಳ ಕಾಲ ಜೈಲುಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಈ ಮೂಲಕ ಅಮೆರಿಕದ ಜನತೆಗೆ ದಶಕಗಳ ಜನಾಂಗೀಯ ನಿಂದನೆ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ.

ಕಳೆದ ವರ್ಷ ಜಾರ್ಜ್​ ಫ್ಲಾಯ್ಡ್​ ಕೊಲೆ ಸಂಭವಿಸಿದ ಬಳಿಕ ಅಮೆರಿಕದಲ್ಲಿ ಭಾರೀ ದೊಡ್ಡ ಗಲಭೆ ಉಂಟಾಗಿತ್ತು. ಅಮೆರಿಕದ ಬಹುತೇಕ ನಗರಗಳಲ್ಲಿ ದಂಗೆ ಏರ್ಪಟ್ಟಿತ್ತು.

46 ವರ್ಷದ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್​ರ ಕುತ್ತಿಗೆಯನ್ನ ಡೆರೆಕ್​ ತಮ್ಮ ಮೊಣಕಾಲಿನಲ್ಲಿ ಸಿಲುಕಿಸಿಕೊಂಡು ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. 9 ನಿಮಿಷ 29 ಸೆಕೆಂಡ್​ಗಳ ಕಾಲ ಡೆರೆಕ್​ರ ಮೊಣಕಾಲಿನ ನಡುವೆ ಒದ್ದಾಡುತ್ತಿದ್ದ ಫ್ಲಾಯಿಡ್​ ಬಳಿಕ ಸಾವನ್ನಪ್ಪಿದ್ದರು.ಈ ಘಟನೆಯು ದಶಕಗಳ ಜನಾಂಗೀಯ ನಿಂದನೆಯ ಆಕ್ರೋಶವನ್ನ ಮತ್ತೆ ಹೆಚ್ಚು ಮಾಡಿತ್ತು. ಹೀಗಾಗಿ ಆಕ್ರೋಶಗೊಂಡ ಜನತೆ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು.

ಈ ಘಟನೆ ಸಂಬಂಧ ವಿಡಿಯೋ ಕೂಡ ವೈರಲ್​ ಆಗಿತ್ತು. ವಿಡಿಯೋದಲ್ಲಿ ಆಫ್ರಿಕಾ ಮೂಲದ ಅಮೆರಿಕ ನಿವಾಸಿ ಫ್ಲಾಯ್ಡ್​​ ನನಗೆ ಉಸಿರಾಡಲು ಆಗುತ್ತಿಲ್ಲ ಎಂದು ಹೇಳುತ್ತಿರೋದು ಸ್ಪಷ್ಟವಾಗಿ ಕೇಳುತ್ತಿತ್ತು.

ಪ್ರಕರಣ ಸಂಬಂಧ ಬಹಳ ವರ್ಷಗಳ ಬಳಿಕ ಮೌನ ಮುರಿದ ಚೌವಿನ್,​​ ಪ್ಲೋಯ್ಡ್​ ಕುಟುಂಬಕ್ಕೆ ಸಂತಾಪ ಸೂಚಿಸಿದ್ರು. ಕಪ್ಪು ವ್ಯಕ್ತಿಯನ್ನ ಕೊಲೆ ಮಾಡಿದ ಆರೋಪದಡಿಯಲ್ಲಿ ಅಮೆರಿಕದ ಪೊಲೀಸ್​ ಅಧಿಕಾರಿಗೆ ಇದುವರೆಗೆ ನೀಡಲಾದ ಅತ್ಯಂತ ಸುದೀರ್ಘ ಜೈಲುಶಿಕ್ಷೆ ಇದಾಗಿದೆ.

ಆದರೆ ಕೋರ್ಟ್​ ನೀಡಿದ ಈ ಶಿಕ್ಷೆಯಿಂದ ಫ್ಲೋಯ್ಡ್​ ಕುಟುಂಬಸ್ಥರು ಖುಷಿಯಾದಂತೆ ಕಂಡುಬರಲಿಲ್ಲ. ಏಕೆಂದರೆ ಫ್ಲಾಯ್ಡ್​ ಪರ ವಕೀಲರು 30 ವರ್ಷಗಳ ಜೈಲು ಶಿಕ್ಷೆಗೆ ಬೇಡಿಕೆ ಇಟ್ಟಿದ್ದರು.

ಅಲ್ಲದೇ ಜೈಲಿನಲ್ಲಿ ಉತ್ತಮ ನಡವಳಿಕೆ ತೋರಿದಲ್ಲಿ 45 ವರ್ಷದ ಚೌವಿನ್​​ ತಮ್ಮ ಮುಕ್ಕಾಲು ಭಾಗ ಶಿಕ್ಷೆಯನ್ನ ಪೂರ್ತಿಗೊಳಿಸಿದ ನಂತರ ಅಂದರೆ 15 ವರ್ಷಗಳ ಜೈಲು ಶಿಕ್ಷೆ ಬಳಿಕ ಪೆರೋಲ್​ ಮೂಲಕ ಜೈಲಿನಿಂದ ಹೊರಬರಬಹುದು ಎಂದು ಕೋರ್ಟ್ ಹೇಳಿದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...