alex Certify GOOD NEWS: ಕೇವಲ 999 ರೂ. ಗಳಿಗೆ ವಿಮಾನ ಪ್ರಯಾಣ ಲಭ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

GOOD NEWS: ಕೇವಲ 999 ರೂ. ಗಳಿಗೆ ವಿಮಾನ ಪ್ರಯಾಣ ಲಭ್ಯ

ದೇಶೀ ಮಾರ್ಗಗಳ ಮೇಲೆ ಬಂಪರ್‌ ಕೊಡುಗೆಗಳನ್ನು ಘೋಷಿಸಿರುವ ವಿಮಾನಯಾನ ಸೇವಾದಾರ ಸಂಸ್ಥೆಗಳು ಪ್ರಯಾಣಿಕರಿಗೆ ಶುಭಸುದ್ದಿ ಕೊಟ್ಟಿವೆ.

ವಿಸ್ತಾರಾ ಏರ್‌ಲೈನ್‌ ಸಕಲ ವೆಚ್ಚವನ್ನೂ ಒಳಗೊಂಡ ಒನ್‌-ವೇ ಟಿಕೆಟ್‌ ದರಗಳನ್ನು 1099 ರೂ.ಗಳಿಂದ ಆರಂಭಿಸುವ ಮಾನ್ಸೂನ್ ಫ್ಲಾಶ್ ಸೇಲ್‌ಗೆ ಚಾಲನೆ ಕೊಟ್ಟಿದೆ. ಈ ಟಿಕೆಟ್‌ ಸೇಲ್‌ ಜೂನ್ 24ರಿಂದ ಜೂನ್ 25ರ ಮಧ್ಯ ರಾತ್ರಿವರೆಗೆ ಇರಲಿದ್ದು, ಆಗಸ್ಟ್‌ 1, 2021ರಿಂದ ಅಕ್ಟೋಬರ್‌ 12, 2021ರ ನಡುವಿನ ಫ್ಲೈಟ್‌ಗಳ ಮೇಲೆ ಅನ್ವಯಿಸಲಿದೆ.

ತೆರಿಗೆ ಪಾವತಿದಾರರ ಗಮನಕ್ಕೆ: ’ವಿವಾದ್ ಸೇ ವಿಶ್ವಾಸ್’ ಸ್ಕೀಂ ಗಡುವು ವಿಸ್ತರಣೆ

ಇದೇ ವೇಳೆ ಸ್ಪೈಸ್‌ ಜೆಟ್ ಸಹ ಮೆಗಾ ಮಾನ್ಸೂನ್ ಸೇಲ್‌ ಆರಂಭಿಸಿದ್ದು, 999 ರೂಪಾಯಿಗಳಿಂದ ಟಿಕೆಟ್‌ ದರಗಳನ್ನು ಆರಂಭಿಸಿದೆ. ಈ ಸೇಲ್‌ ಜೂನ್ 25 – ಜೂನ್‌ 30ರವರೆಗೆ ಇರಲಿದ್ದು, ಆಗಸ್ಟ್‌ 1, 2021ರಿಂದ ಮಾರ್ಚ್ 31, 2022ರವರೆಗೂ ಪ್ರಯಾಣದ ಅವಧಿಯನ್ನು ಕವರ್‌ ಮಾಡುತ್ತದೆ. ಸೀಮಿತ ಅವಧಿಯ ಈ ಆಫರ್‌ಅನ್ನು ಮೊದಲು ಬಂದವರಿಗೆ ಆದ್ಯತೆಯನುಸಾರ ಕೊಡಲಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...