alex Certify ದಂಗಾಗಿಸುವಂತಿದೆ ವೃದ್ದನ ʼಕೊರೊನಾʼ ಸೋಂಕಿನ ಕಥೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಂಗಾಗಿಸುವಂತಿದೆ ವೃದ್ದನ ʼಕೊರೊನಾʼ ಸೋಂಕಿನ ಕಥೆ

72 ವರ್ಷದ ಬ್ರಿಟಿಷ್​ ವೃದ್ಧನೊಬ್ಬ ಬರೋಬ್ಬರಿ 305 ದಿನಗಳ ಕಾಲ ಅಂದರೆ ಸರಿ ಸುಮಾರು 10 ತಿಂಗಳು ಕೋವಿಡ್​ ಸೋಂಕಿನಿಂದ ಬಳಲಿದ್ದಾನೆ. ಈ ಪ್ರಕರಣವನ್ನ ವಿಶ್ವದ ಅತ್ಯಂತ ಸುದೀರ್ಘ ಕೊರೊನಾ ಸೋಂಕು ಎಂದು ಪರಿಗಣಿಸಲಾಗಿದೆ.

ಬ್ರಿಸ್ಟೋಲ್​ನ ನಿವಾಸಿಯಾದ ಡೇವ್​ ಸ್ಮಿತ್​​ 2020ರಲ್ಲಿ ಬ್ರಿಟನ್​ನಲ್ಲಿ ಕೊರೊನಾ ಮೊದಲ ಅಲೆ ಇದ್ದ ಸಂದರ್ಭದಲ್ಲಿ ಸೋಂಕಿಗೆ ಗುರಿಯಾಗಿದ್ದರು. ಇದಾದ ಬಳಿಕ ಈ ಹತ್ತು ತಿಂಗಳಲ್ಲಿ ಅವರಿಗೆ 43 ಬಾರಿ ಪರೀಕ್ಷೆ ಮಾಡಲಾಗಿತ್ತಾದರೂ ಪ್ರತಿಬಾರಿಯೂ ಪರೀಕ್ಷೆಯ ಫಲಿತಾಂಶ ಪಾಸಿಟಿವ್​ ಬಂದಿದೆ. ಇವರನ್ನ 7 ಬಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಪ್ರತಿ ಬಾರಿ ಆಸ್ಪತ್ರೆಗೆ ಬೆಡ್​ನಲ್ಲಿ ಮಲಗುವ ಪರಿಸ್ಥಿತಿ ಬಂದಾಗಲು ನನಗೆ ದುಃಖವಾಗ್ತಿತ್ತು. ನಾನು ಸಾವಿನ ಬಾಗಿಲ ಬಳಿ ಮಲಗಿದ್ದೇನೆ ಎಂದೆನಿಸುತ್ತಿತ್ತು ಎಂದು ಡೇವ್​ ಸ್ಮಿತ್​ ಹೇಳಿದ್ದಾರೆ. ಅಂದಹಾಗೆ ಇವರ ಪತ್ನಿ ಐದು ಬಾರಿ ಪತಿಯ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಿದ್ದರಂತೆ..!

ನಿರುದ್ಯೋಗಿಗಳಿಗೆ GOOD NEWS: ಆಪರೇಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

2019ರಲ್ಲಿ ಲ್ಯೂಕೆಮಿಯಾ ವಿರುದ್ಧ ಹೋರಾಡಿ ಗೆದ್ದಿದ್ದ ಸ್ಮಿತ್​​ 2020ರ ಮಾರ್ಚ್ ತಿಂಗಳಲ್ಲಿ ಸೋಂಕಿಗೆ ಗುರಿಯಾಗಿದ್ದರು. ಆದರೆ ಏಪ್ರಿಲ್​ ತಿಂಗಳವರೆಗೂ ಅವರು ಟೆಸ್ಟ್​ ಮಾಡಿಸಿರಲಿಲ್ಲ. ಆದರೆ ಶ್ವಾಸಕೋಶದಲ್ಲಿ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗೋದು ಅನಿವಾರ್ಯವಾಯ್ತು.

ಶಾಲೆಯಲ್ಲಿ ನೀಡುವ ʼಬಸ್ಕಿʼ ಶಿಕ್ಷೆ ಹಿಂದಿದೆ ವೈಜ್ಞಾನಿಕ ಕಾರಣ

ಮನೆಯಲ್ಲಿ ಚಿಕಿತ್ಸೆ ನೀಡುವ ವ್ಯವಸ್ಥೆಯನ್ನೂ ಮಾಡಲಾಯ್ತು. ಆದರೆ ಅದು ಸಾಕಾಗಲಿಲ್ಲ. ಹೀಗಾಗಿ ಜುಲೈನಲ್ಲಿ ಮತ್ತೆ ಆಸ್ಪತ್ರೆಗೆ ದಾಖಲಾದ್ರು. ಈ ಬಾರಿ ಮತ್ತೆ ಕೋವಿಡ್​ ಪಾಸಿಟಿವ್​ಗೊಳಗಾಗಿದ್ದರು. ಇದೇ ರೀತಿ 43 ಬಾರಿ ಪರೀಕ್ಷೆ ಮಾಡಿದಾಗಲೂ ಪಾಸಿಟಿವ್​ ಫಲಿತಾಂಶ ಪಡೆದರು. 117 ಕೆಜಿ ಇದ್ದ ಸ್ಮಿತ್​ ಕೊರೊನಾದಿಂದಾಗಿ 63 ಕೆಜಿಗೆ ಇಳಿದಿದ್ದರು.

ಕೊನೆಗೂ ಸ್ಮಿತ್​ ಕೊರೊನಾ ನೆಗೆಟಿವ್​ ಆಗೋದ್ರಲ್ಲಿ ಯಶಸ್ವಿಯಾದ್ರು. ಈ ಸುದ್ದಿ ಕೇಳಿ ಫುಲ್​ ಖುಷ್​ ಆದ ಸ್ಮಿತ್​ ಪತ್ನಿಯ ಬಳಿ ಹೇಳಿ ಶ್ಯಾಂಪೇನ್​ ತರಿಸುವ ಮೂಲಕ ಸಂಭ್ರಮವನ್ನಾಚರಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...