alex Certify ಕೇಂದ್ರ ಸಚಿವ ರವಿಶಂಕರ್​ ಪ್ರಸಾದ್​ ಅಧಿಕೃತ ಖಾತೆ ಲಾಕ್​ ಮಾಡಿದ್ದ ಟ್ವಿಟರ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇಂದ್ರ ಸಚಿವ ರವಿಶಂಕರ್​ ಪ್ರಸಾದ್​ ಅಧಿಕೃತ ಖಾತೆ ಲಾಕ್​ ಮಾಡಿದ್ದ ಟ್ವಿಟರ್..!

ಟ್ವಿಟರ್​​ ಸಂಸ್ಥೆಯು ಕೇಂದ್ರ ಸಚಿವ ರವಿಶಂಕರ್​ ಪ್ರಸಾದ್​​ರ ಖಾತೆಯನ್ನ ಲಾಕ್​ ಮಾಡಿತ್ತು.

ಇದರಿಂದಾಗಿ ತಮ್ಮ ಸ್ವಂತ ಟ್ವಿಟರ್ ಖಾತೆಗೆ ರವಿಶಂಕರ್​ ಪ್ರಸಾದ್​​ಗೆ ಎಂಟ್ರಿ ಇಲ್ಲದಂತೆ ಆಗಿತ್ತು. ರವಿಶಂಕರ್ ಪ್ರಸಾದ್​ರ ಟ್ವಿಟರ್​ ಖಾತೆ ಸಾರ್ವಜನಿಕವಾಗಿ ಗೋಚರವಾಗಿತ್ತಿದ್ದರೂ ಸಹ ಖಾತೆಯ ಪಾಸ್​ವರ್ಡ್​ ತಿಳಿದವರಿಗೆ ಅಕೌಂಟ್​​ ಪ್ರವೇಶಿಸಲು ಹಾಗೂ ಯಾವುದೇ ಪೋಸ್ಟ್​ಗಳನ್ನ ಶೇರ್​ ಮಾಡಲು ಟ್ವಿಟರ್​ ಅನುಮತಿ ನೀಡುತ್ತಿಲ್ಲ.

ಕೇಂದ್ರ ಸಚಿವ ರವಿಶಂಕರ್​ ಪ್ರಸಾದ್​ ಹಾಗೂ ಅವರ ತಂಡ ಟ್ವಿಟರ್​ ಖಾತೆಗೆ ಲಾಗಿನ್​ ಮಾಡಲು ಪ್ರಯತ್ನಿಸಿದ ವೇಳೆಯಲ್ಲಿ, ಡಿಜಿಟಲ್​ ಮಿಲೇನಿಯಂ ಕಾಪಿರೈಟ್​ ಆಕ್ಟ್​​ನ ಅಡಿಯಲ್ಲಿ ದಾಖಲಾದ ದೂರನ್ನ ಪರಿಗಣಿಸಿ ನಿಮ್ಮ ಖಾತೆಯನ್ನ ಲಾಕ್​ ಮಾಡಲಾಗಿದೆ. ಈ ಖಾತೆಯ ಬಳಕೆದಾರರು ಟ್ವಿಟರ್​ ನಿಯಮಾವಳಿಗಳನ್ನ ಉಲ್ಲಂಘಿಸಿದ್ದಾರೆ. ನಿಯಾಮವಳಿಗಳನ್ನ ಉಲ್ಲಂಘಿಸಿದ ಅಂಶಗಳನ್ನ ನಿಮ್ಮ ಖಾತೆಯಿಂದ ತೆಗೆದು ಹಾಕಿದ ಬಳಿಕ ಖಾತೆ ಪ್ರವೇಶಿಸಲು ಟ್ವಿಟರ್​ ಅನುಮತಿ ನೀಡಲಿದೆ. ಆದರೆ ಈ ತಪ್ಪುಗಳು ಪುನಾರವರ್ತನೆಯಾದಲ್ಲಿ ಹಕ್ಕು ಸ್ವಾಮ್ಯ ಉಲ್ಲಂಘನೆ ನೀತಿಯ ಅಡಿಯಲ್ಲಿ ಟ್ವಿಟರ್​ ನಿಮ್ಮ ಖಾತೆಯನ್ನ ಶಾಶ್ವತವಾಗಿ ಅಳಿಸಿ ಹಾಕಲಿದೆ ಎಂದು ಸಂದೇಶ ನೀಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...