ಕೋವಿಡ್ 19 ಸೋಂಕಿಗೆ ಕಾರಣವಾಗಿರುವ ವೈರಾಣು ಚೀನಾದಲ್ಲಿ ಮೊದಲ ಸೋಂಕು ಪತ್ತೆಯಾಗುವ ಮುನ್ನ ಅಂದರೆ 2019ರ ಅಕ್ಟೋಬರ್ ತಿಂಗಳಿನಿಂದಲೇ ಹರಡಲು ಆರಂಭಿಸಿತ್ತು ಎಂಬ ಆಘಾತಕಾರಿ ಮಾಹಿತಿ ಹೊಸ ಅಧ್ಯಯನವೊಂದರಲ್ಲಿ ಬಯಲಾಗಿದೆ.
ಕೆಂಟ್ನ ಬ್ರಿಟನ್ಸ್ ವಿಶ್ವ ವಿದ್ಯಾಲಯದ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ಕೋವಿಡ್ 19 ವೈರಸ್ ಮೊದಲ ಬಾರಿಗೆ 2019ರ ಅಕ್ಟೋಬರ್ ತಿಂಗಳಲ್ಲಿಯೇ ಕಾಣಿಸಿಕೊಂಡಿದೆ. ಈ ವರದಿಯನ್ನ ಪಿಎಲ್ಓಸ್ ಪ್ಯಾಥೋಗನ್ಸ್ ಜರ್ನಲ್ನಲ್ಲಿ ಪ್ರಕಟಿಸಲಾಗಿದೆ.
ಕೊರೊನಾ ವೈರಸ್ ಬಹುಶಃ 2019ರ ನವೆಂಬರ್ 17ನೇ ತಾರೀಖಿನಂದು ಹೊರಹೊಮ್ಮಿದ್ದರಬಹುದು ಎಂದು ಅಂದಾಜಿಸಲಾಗಿದೆ. 2020 ಜನವರಿಯ ವೇಳೆಗೆ ಅದು ವಿಶ್ವಾದ್ಯಂತ ಪಸರಿಸಿದೆ ಎಂದು ಅಂದಾಜಿಸಲಾಗಿದೆ.
ಚೀನಾದಲ್ಲಿ ಮೊದಲ ಕೋವಿಡ್ 19 ಪ್ರಕರಣವು 2019ರ ಡಿಸೆಂಬರ್ ತಿಂಗಳಿನಲ್ಲಿ ವರದಿಯಾಗಿದೆ. ಇದು ವುಹಾನ್ನ ಸಮುದ್ರ ಆಹಾರ ಮಾರುಕಟ್ಟೆಗೆ ಸಂಬಂಧಿಸಿದ್ದಾಗಿದೆ.