ಬಾಲ್ಯದಲ್ಲಿ ನೀವು ನಂಬಿದ್ದ ಅತಿ ದೊಡ್ಡ ಸುಳ್ಳು ಯಾವುದು..? ಟ್ವೀಟಿಗರಿಂದ ಬಂತು ಸಖತ್ ಫನ್ನಿ ಉತ್ತರ 25-06-2021 6:43AM IST / No Comments / Posted In: Latest News, India, Live News ಪ್ರತಿಯೊಬ್ಬರ ಜೀವನದಲ್ಲೂ ಬಾಲ್ಯದ ದಿನಗಳು ಅಂದರೆ ವಿಶೇಷವೇ ಸರಿ. ಜೀವನದ ಕಷ್ಟ ಅಂದರೆ ಏನು ಎಂದು ಗೊತ್ತಿರದ ಆ ಕಾಲದಲ್ಲಿ ಮುಗ್ದತೆಯಿಂದಲೇ ಜೀವನವನ್ನ ನಡೆಸುತ್ತಿದ್ದೆವು. ಈ ಬಾಲ್ಯದ ಜೀವನದಲ್ಲಿ ಕೆಲವೊಂದು ಸುಳ್ಳು ವಿಚಾರಗಳನ್ನ ನಾವು ಸತ್ಯ ಎಂದೇ ನಂಬಿರುತ್ತೇವೆ. ಟ್ವಿಟರ್ನಲ್ಲಿ ಇದೀಗ ಇಂತದ್ದೊಂದು ಟ್ರೆಂಡ್ ಆರಂಭವಾಗಿದೆ. ಅದೇನೆಂದರೆ ಬಾಲ್ಯದಲ್ಲಿ ನೀವು ಸತ್ಯ ಎಂದು ಭಾವಿಸಿದ್ದ ಅತೀ ದೊಡ್ಡ ಸುಳ್ಳು ಯಾವುದು ಎಂದಾಗಿದೆ. ಇದಕ್ಕೆ ಅನೇಕರು ತಮ್ಮದೇ ಆದ ರೀತಿಯಲ್ಲಿ ಫನ್ನಿ ಉತ್ತರವನ್ನ ನೀಡಿದ್ದಾರೆ. ಬಾಲ್ಯದ ದಿನಗಳಲ್ಲಿ ಹಣ್ಣಿನ ಬೀಜವನ್ನ ತಿಂದಾಗ ಹೊಟ್ಟೆಯಿಂದ ಗಿಡ ಹುಟ್ಟುತ್ತೆ ಅನ್ನೋದು, ಚಪ್ಪಲಿ ಉಲ್ಟಾ ಪಲ್ಟಾ ಇಟ್ಟರೆ ಮನೆಯಲ್ಲಿ ಜಗಳ ಆಗುತ್ತೆ ಅನ್ನೋದು, ಸಿನಿಮಾದಲ್ಲಿ ಹಾಡಿಗೆ ನೃತ್ಯ ಮಾಡುವ ನಟ – ನಟಿಯರು ಇನ್ನೊಂದು ಉಡುಪನ್ನ ಪಾಕೆಟ್ನಲ್ಲೇ ಇಟ್ಟುಕೊಳ್ತಾರೆ ಹೀಗೆ ಸಾಕಷ್ಟು ವಿಚಾರಗಳನ್ನ ನೆಟ್ಟಿಗರು ಶೇರ್ ಮಾಡಿದ್ದಾರೆ https://twitter.com/bidishamaybe/status/1406980634107514884 As a kid I used to think swallowing watermelon seeds will cause watermelon plants to grow in my stomach 😄 Is it just me or happened with everyone? — Not a Vegetarian (@Not_a_Veggie_) June 1, 2021 Don't jump over a person or else they won't grow. Jump back in the opposite direction to reverse the effect — Ravi (@cmaravisaini) June 22, 2021 Australian batsman ki bat me spring thi — hot priest (@ablahhmard) June 21, 2021 .