ಲೈಂಗಿಕ ಕ್ರಿಯೆ ದೈಹಿಕ ಮತ್ತು ಮಾನಸಿಕ ಪ್ರಯೋಜನಗಳನ್ನು ನೀಡುತ್ತದೆ. ಆದ್ರೆ ಲೈಂಗಿಕ ಕ್ರಿಯೆ ನಡೆದ ನಂತ್ರ ಕೆಲವೊಂದು ತಪ್ಪುಗಳನ್ನು ಮಾಡಬಾರದು. ಇದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಲೈಂಗಿಕ ರೋಗ ಕಾಡುವ ಸಾಧ್ಯತೆಯಿದೆ. ಲೈಂಗಿಕ ಕ್ರಿಯೆ ನಂತ್ರ ಏನು ಮಾಡಬಾರದು ಎಂಬ ವಿವರ ಇಲ್ಲಿದೆ.
ಸಂಭೋಗದ ನಂತರ ಕೆಲವು ವಿಷಯಗಳ ಬಗ್ಗೆ ತುಂಬಾ ಕಾಳಜಿ ವಹಿಸಬೇಕು. ಸಂಭೋಗದ ನಂತರ ಕೈಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಬೇಕು. ಅನೇಕರು ಬಾಯಿ, ಮೂಗು, ಕಣ್ಣುಗಳನ್ನು ಅದೇ ಕೈನಿಂದ ಮುಟ್ಟುತ್ತಾರೆ. ಸಂಭೋಗದ ಸಮಯದಲ್ಲಿ ಕೈಗಳು ಜನನಾಂಗಗಳೊಂದಿಗೆ ಸಂಪರ್ಕಕ್ಕೆ ಬರುತ್ತವೆ. ಇದರಿಂದಾಗಿ ಖಾಸಗಿ ಭಾಗದ ಬ್ಯಾಕ್ಟೀರಿಯಾಗಳು ಕೈನಿಂದ ಬೇರೆ ಭಾಗಕ್ಕೆ ಹೋಗಿ ಸೋಂಕು ಹರಡುವ ಸಾಧ್ಯತೆಯಿರುತ್ತದೆ.
ಸಂಭೋಗದ ನಂತರ ಮನಸ್ಸು ಮತ್ತು ದೇಹವು ವಿಶ್ರಾಂತಿ ಪಡೆಯುತ್ತದೆ. ನಿದ್ರೆ ಬರಲು ಶುರುವಾಗುತ್ತದೆ. ನಿದ್ದೆ ಮಾಡುವಾಗ ಬಿಗಿಯಾದ ಬಟ್ಟೆಗಳನ್ನು ಧರಿಸಬಾರದು. ಲೈಂಗಿಕ ಕ್ರಿಯೆಯ ನಂತರ ದೇಹದ ಉಷ್ಣತೆ ಅಧಿಕವಾಗಿರುತ್ತದೆ. ದೇಹ ಬೆವರುತ್ತಿರುತ್ತದೆ. ಬಿಗಿಯಾದ ಬಟ್ಟೆಗಳನ್ನು ಧರಿಸಿ ಮಲಗಿದರೆ ಜನನಾಂಗ ಮತ್ತು ಚರ್ಮದ ಅಲರ್ಜಿ, ತುರಿಕೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
ಆರೋಗ್ಯ ತಜ್ಞರ ಪ್ರಕಾರ, ಮಹಿಳೆಯರು ಹೆಚ್ಚಾಗಿ, ಲೈಂಗಿಕ ಕ್ರಿಯೆಯ ನಂತರ ಸೋಪಿನಿಂದ ಜನನಾಂಗವನ್ನು ಸ್ವಚ್ಛಗೊಳಿಸುತ್ತಾರೆ. ಸಂಭೋಗದ ನಂತರ ಮಹಿಳೆಯರ ಜನನಾಂಗಗಳು ಸೂಕ್ಷ್ಮವಾಗುತ್ತವೆ. ಸೋಪು ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಹಾಗಾಗಿ ಲೈಂಗಿಕ ಕ್ರಿಯೆ ನಂತ್ರ ಬೆಚ್ಚಗಿನ ನೀರಿನಲ್ಲಿ ಸ್ವಚ್ಛಗೊಳಿಸಬೇಕು.
ಕೆಲವರು ಸಂಭೋಗದ ನಂತರ ತಮ್ಮ ಖಾಸಗಿ ಅಂಗವನ್ನು ಸ್ವಚ್ಛಗೊಳಿಸಲು ಒರಟು ಬಟ್ಟೆಗಳನ್ನು ಬಳಸುತ್ತಾರೆ. ಇನ್ನು ಕೆಲವರು ಟಿಶ್ಯು ಬಳಸ್ತಾರೆ. ಇದು ಹಾನಿಕಾರಕ. ಕೃತಕ ಸುಗಂಧ ಮತ್ತು ರಾಸಾಯನಿಕ ಖಾಸಗಿ ಅಂಗಕ್ಕೆ ಅಪಾಯ ತರುತ್ತದೆ.
ಶಾರೀರಿಕ ಸಂಬಂಧದ ನಂತ್ರ ಒಂದು ಗಂಟೆಯೊಳಗೆ ಮೂತ್ರ ವಿಸರ್ಜಿಸಬೇಕು. ಸಂಭೋಗದ ನಂತರ ಅನೇಕ ಬ್ಯಾಕ್ಟೀರಿಯಾಗಳು ಮತ್ತು ಸೂಕ್ಷ್ಮಜೀವಿಗಳು ಖಾಸಗಿ ಭಾಗದಲ್ಲಿ ಕಂಡು ಬರುತ್ತವೆ. ಇದರಿಂದಾಗಿ ಲೈಂಗಿಕ ರೋಗ ಹರಡುವ ಸಾಧ್ಯತೆಯಿದೆ.