ಕೊರೊನಾ ವೈರಸ್ ತಡೆಗಟ್ಟಲು ಜಾರಿಯಾದ ಲಾಕ್ಡೌನ್ ಆದೇಶದಿಂದಾಗಿ ವಿಶ್ವದ ಎಲ್ಲಾ ಕಡೆಯಲ್ಲೂ ರೆಸ್ಟೋರೆಂಟ್ ಉದ್ಯಮ ಸಂಪೂರ್ಣ ನೆಲ ಕಚ್ಚಿದೆ. ಈಗೀಗ ರೆಸ್ಟೋರೆಂಟ್ ಗಳು ಪುನಾರಂಭವಾಗುತ್ತಿದ್ದು ರೆಸ್ಟೋರೆಂಟ್ ಮಾಲೀಕರು ಉತ್ತಮ ಆದಾಯದ ನಿರೀಕ್ಷೆಯಲ್ಲಿ ಇದ್ದಾರೆ.
ರೆಸ್ಟೋರೆಂಟ್ ಗಳು ಬಾಗಿಲು ಹಾಕಿದ ಮೇಲೆ ಇಲ್ಲಿನ ಸಿಬ್ಬಂದಿಗೂ ಸಹ ಕೆಲಸ ಇಲ್ಲದಂತೆ ಆಗಿದೆ. ಹೀಗಾಗಿ ರೆಸ್ಟೋರೆಂಟ್ ಹಾಗೂ ಅಲ್ಲಿನ ಸಿಬ್ಬಂದಿಯ ಕಷ್ಟ ಅರಿತ ವ್ಯಕ್ತಿಯೊಬ್ಬ ತಾನು ಆರ್ಡರ್ ಮಾಡಿದ ಫುಡ್ಗಿಂತ ಬರೋಬ್ಬರಿ 400 ಪಟ್ಟು ಹೆಚ್ಚು ಹಣವನ್ನ ಟಿಪ್ಸ್ ಮೂಲಕ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾನೆ.
ಅಮೆರಿಕದ ರೆಸ್ಟೋರೆಂಟ್ ಒಂದಕ್ಕೆ ಬಂದ ಗ್ರಾಹಕನೊಬ್ಬ 37.93 ಡಾಲರ್ ಮೌಲ್ಯದ ಆಹಾರವನ್ನ ಆರ್ಡರ್ ಮಾಡಿದ್ದರು. ಆದರೆ ಇಲ್ಲಿನ ಸಿಬ್ಬಂದಿಗೆ 16 ಸಾವಿರ ಡಾಲರ್ ಮೌಲ್ಯ ಹಣವನ್ನ ಟಿಪ್ಸ್ ರೂಪದಲ್ಲಿ ನೀಡಿದ್ದಾರೆ.
ಈ ಬಗ್ಗೆ ಮೊದಲು ರೆಸ್ಟೋರೆಂಟ್ ಸಿಬ್ಬಂದಿ ಗಮನಕ್ಕೆ ಬಂದಿರಲಿಲ್ಲ. ಬಳಿಕ ಗ್ರಾಹಕರಿಗೆ ಕರೆ ಮಾಡಿ ಹೆಚ್ಚು ಹಣ ಸಂದಾಯ ಮಾಡಿರೋದ್ರ ಬಗ್ಗೆ ಮಾಹಿತಿ ಕೇಳಿದಾಗ ಗ್ರಾಹಕ, ನೀವು ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಿದ್ದೀರಾ. ಹೀಗಾಗಿಯೇ ನಾನು ನಿಮಗೆ ಈ ಹಣ ನೀಡಿದ್ದೇನೆ ಎಂದು ಹೇಳಿದ್ದಾರಂತೆ..!