ಕೊಪ್ಪಳ: ಕಾಂಗ್ರೆಸ್ ನಲ್ಲಿ ಒಂದೆಡೆ ಸಿದ್ದರಾಮಯ್ಯನವರೇ ಮುಂದಿನ ಸಿಎಂ ಎಂಬ ಚರ್ಚೆ ನಡೆದಿರುವ ಬೆನ್ನಲ್ಲೇ ಕೊಪ್ಪಳದಲ್ಲಿ ಅಭಿಮಾನಿಯೋರ್ವ ತನ್ನ ಮಗನಿಗೆ ’ಸಿದ್ದರಾಮಯ್ಯ’ ಎಂದು ನಾಮಕರಣ ಮಾಡಿ ಗಮನಸೆಳೆದಿದ್ದಾರೆ.
ಜಿಲ್ಲೆಯ ಕುಕನೂರು ತಾಲೂಕಿನ ದ್ಯಾಂಪುರ ಗ್ರಾಮದ ಮಂಜುನಾಥ್ ಮುರಡಿ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಅಪ್ಪಟ ಅಭಿಮಾನಿಯಾಗಿದ್ದು. ಹಾಗಾಗಿ ತಮ್ಮ ಮಗನಿಗೆ ಸಿದ್ದರಾಮಯ್ಯ ಎಂದು ನಾಮಕರಣ ಮಾಡಿದ್ದಾಗಿ ತಿಳಿಸಿದ್ದಾರೆ.
ಜಗತ್ತಿನ ಅತ್ಯಂತ ಸಣ್ಣ ಗಾತ್ರದ ಕುದುರೆಗೆ ಶ್ವಾನಗಳ ಸಾಥ್
ಮಗು ಜನಿಸಿದ 21ದಿನಗಳ ಬಳಿಕ ಇದೀಗ ಮಗುವಿನ ನಾಮಕರಣ ಮಾಡಿದ್ದು, ಲಾಕ್ ಡೌನ್ ಕಾರಣಕ್ಕಾಗಿ ಸರಳವಾಗಿ ನಾಮಕರಣ ಶಾಸ್ತ್ರ ನೆರವೇರಿಸಿದ್ದಾರಂತೆ. ತನ್ನ ಮಗನಿಗೆ ಸಿದ್ದರಾಮಯ್ಯ ಎಂದು ಹೆಸರಿಡುವುದಾಗಿ ಯತೀಂದ್ರ ಸಿದ್ದರಾಮಯ್ಯ ಅವರಿಗೂ ತಿಳಿಸಿದ್ದಾಗಿ ಮಂಜುನಾಥ್ ಹೇಳಿದ್ದಾರೆ.