ಕೊರೊನಾ ವೈರಸ್ ವಿರುದ್ಧ ಹೋರಾಡಲು ಲಸಿಕೆ ದೊಡ್ಡ ಅಸ್ತ್ರವಾಗಿದೆ. ಇದೇ ಕಾರಣಕ್ಕೆ ದೇಶದಾದ್ಯಂತ ಲಸಿಕೆ ಅಭಿಯಾನ ನಡೆಯುತ್ತಿದೆ. ಲಸಿಕೆ ಹಾಕಿಸಿಕೊಂಡವರು ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಳ್ತಿದ್ದಾರೆ. ಜಾರ್ಖಂಡದ ಗುಲ್ಶನ್ ಲೋಹರ್ ಫೋಟೋ ಕೂಡ ವೈರಲ್ ಆಗಿದೆ.
ಈ ಫೋಟದಲ್ಲಿ ಗುಲ್ಶನ್ ಕೈ ತೋಳಿನ ಬದಲು ತೊಡೆಗೆ ಲಸಿಕೆ ಹಾಕಿಸಿಕೊಂಡಿದ್ದಾರೆ. ಗುಲ್ಶನ್, ಲಸಿಕಾ ಕೇಂದ್ರಕ್ಕೆ ಬರ್ತಿದ್ದಂತೆ ಅಲ್ಲಿನ ಸಿಬ್ಬಂದಿ ಗೊಂದಲಕ್ಕೀಡಾಗಿದ್ದಾರೆ. ಗುಲ್ಶನ್ ಗೆ ಎಲ್ಲಿ ಲಸಿಕೆ ಹಾಕಬೇಕೆಂಬ ಸಮಸ್ಯೆ ಎದುರಾಗಿದೆ. ವಾಸ್ತವವಾಗಿ ಗುಲ್ಶನ್ ದಿವ್ಯಾಂಗ. ಗುಲ್ಶಾನ್ ಗೆ ಎರಡೂ ಕೈಗಳಿಲ್ಲ.
ಗುಲ್ಶಾನ್ ಗೆ ಎರಡೂ ಕೈಗಳಿಲ್ಲ ಎಂಬುದನ್ನು ತಿಳಿಯುತ್ತಿದ್ದಂತೆ ಆರೋಗ್ಯ ಸಿಬ್ಬಂದಿ ಏನು ಮಾಡಬೇಕೆಂದು ಚಿಂತಿಸುತ್ತಿದ್ದರು. ಈ ವೇಳೆ ಗುಲ್ಶನ್ ತೊಡೆಗೆ ಹಾಕುವಂತೆ ಹೇಳಿದ್ದಾರೆ. ನಂತ್ರ ಸಿಬ್ಬಂದಿ ತೊಡೆಗೆ ಲಸಿಕೆ ಹಾಕಿದ್ದಾರೆ. ಎರಡೂ ಕೈಗಳನ್ನು ಕಳೆದುಕೊಂಡಿದ್ದರೂ ಲಸಿಕೆ ಬಿಡದೆ, ತೊಡೆಗೆ ಹಾಕಿಸಿಕೊಂಡ ಗುಲ್ಶನ್ ಎಲ್ಲರಿಗೂ ಮಾದರಿಯಾಗಿದ್ದಾರೆ. ಗುಲ್ಶನ್ ನಡೆ ಎಲ್ಲರಿಗೂ ಪಾಠವಾಗಿದೆ.