ಮಾನವೀಯ ಮೌಲ್ಯಗಳುಳ್ಳ ವೈದ್ಯರಿಗೆ ತಮ್ಮ ಬಳಿ ಬರುವ ರೋಗಿಗಳೊಂದಿಗೆ ಬಲವಾದ ಬಾಂಧವ್ಯ ಬೆಳೆಯುವ ಅನೇಕ ಪ್ರಕರಣಗಳನ್ನು ಕಂಡಿದ್ದೇವೆ. ಬೆಂಗಳೂರಿನ ವೈದ್ಯರೊಬ್ಬರು ಇಂಥದ್ದೇ ಒಂದು ವಿಚಾರವನ್ನು ಶೇರ್ ಮಾಡಿಕೊಂಡಿದ್ದಾರೆ.
ಒಮ್ಮೆ ಈ ‘ರವಾ ಪಡ್ಡು’ ಮಾಡಿ ನೋಡಿ
ಡಾ. ಸೋಮಲರಾಮ್ ವೆಂಕಟೇಶ್ ಹೆಸರಿನ ಈ ವೈದ್ಯರು ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡ ಈ ಕಥೆಯಲ್ಲಿ, ಕೋಲಾರದಿಂದ ತಮ್ಮ ಬಳಿಗೆ ವರ್ಷಗಳಿಂದ ಬರುತ್ತಿದ್ದ ರೋಗಿಯೊಬ್ಬರು ತಮಗೆ ಪ್ರತಿ ವರ್ಷವೂ ಮಾವಿನ ಹಣ್ಣುಗಳನ್ನು ಕಳುಹಿಸುತ್ತಿದ್ದು, ಅವರು ಇತ್ತೀಚೆಗೆ ನಿಧನರಾದ ಬಳಿಕ ಮಾವಿನ ಹಣ್ಣನ್ನು ಕಳುಹಿಸುವ ಅವರ ಸಂಪ್ರದಾಯವನ್ನು ಅವರ ಕುಟುಂಬಸ್ಥರು ಮುಂದುವರೆಸುತ್ತಿರುವ ವಿಷಯವನ್ನು ಭಾವಪೂರ್ಣವಾಗಿ ಹೇಳಿಕೊಂಡಿದ್ದಾರೆ.
ಮಕ್ಕಳ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ‘ಆಹಾರ’ದಲ್ಲಿರಲಿ ಇದು
ಮಾವಿನ ಹಣ್ಣುಗಳನ್ನು ತಂದುಕೊಟ್ಟ ತಮ್ಮ ರೋಗಿಯ ಮಗನೊಂದಿಗೆ ಮುಂದುವರೆದ ಒಡನಾಟವನ್ನು ಹೇಳಿಕೊಂಡ ವೈದ್ಯರ ಈ ಪೋಸ್ಟ್‌ಗೆ ಮೆಚ್ಚುಗೆಯ ಕಾಮೆಂಟ್‌ಗಳು ವ್ಯಕ್ತವಾಗಿವೆ.