ಬೆಂಗಳೂರು: ಬಿಬಿಎಂಪಿ ಮಾಜಿ ಸದಸ್ಯೆ ರೇಖಾ ಕದಿರೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಅನುಮಾನಗಳು ವ್ಯಕ್ತವಾಗಿದ್ದು, ಈ ನಡುವೆ ಬಿಜೆಪಿ ಮುಖಂಡ ಎನ್.ಆರ್.ರಮೇಶ್, ಇದೊಂದು ರಾಜಕೀಯ ಪ್ರೇರಿತ ಕೊಲೆಯಾಗಿದೆ ಎಂದು ಆರೋಪಿಸಿದ್ದಾರೆ.
BIG NEWS: ವಿದ್ಯಾರ್ಥಿಗಳಿಗೆ ಲಸಿಕೆಯೊಂದಿಗೆ ಪದವಿ ಕಾಲೇಜು ಆರಂಭಕ್ಕೆ ಸಿದ್ಧತೆ
ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಎನ್.ಆರ್.ರಮೇಶ್, ರೇಖಾ ಅವರ ಹತ್ಯೆ ನೂರಕ್ಕೆ ನೂರರಷ್ಟು ರಾಜಕೀಯ ಪ್ರೇರಿತ. ಬಿಬಿಎಂಪಿ ಮುಂದಿನ ಚುನಾವಣೆ ಮುಂದುಟ್ಟುಕೊಂಡು ಈ ಹತ್ಯೆ ನಡೆಸಲಾಗಿದೆ. ಶಾಸಕ ಜಮೀರ್ ಅಹ್ಮದ್ ಕ್ಷೇತ್ರದಲ್ಲಿ ಸೇಫ್ಟಿ ಇಲ್ಲ. ಪೀಟರ್ ಎಂಬಾತನ ಮೇಲೆ ಅನುಮಾನವಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ರಾಜ್ಯಗಳಲ್ಲಿ ಮುಂದಿನ ವಾರ ನಾಲ್ಕು ದಿನ ʼಬಂದ್ʼ ಇರಲಿದೆ ಬ್ಯಾಂಕ್
ಈಗಾಗಲೇ ನಾವು ರೇಖಾ ಅವರೇ ನಮ್ಮ ಅಭ್ಯರ್ಥಿ ಎಂದು ಘೋಷಿಸಿದ್ದೆವು. ಪಾಲಿಕೆ ಚುನಾವಣೆಯಲ್ಲಿ ಅವರು ಗೆಲ್ಲುವ ಸಾಧ್ಯತೆ ಇರುವುದರಿಂದಾಗಿ ಸಂಚು ರೂಪಿಸಿ ಹತ್ಯೆ ನಡೆಸಲಾಗಿದೆ. ಜಮೀರ್ ಅಹ್ಮದ್ ತಮ್ಮ ಹಿಂಬಾಲಕರ ಮೂಲಕ ಈ ರೀತಿ ಮಾಡುವುದು ತಪ್ಪು ಎಂದು ಗಂಭೀರ ಆರೋಪ ಮಾಡಿದ್ದಾರೆ.